Hot Posts

6/recent/ticker-posts

ನಟ ಚೇತನ್ ಅರೆಸ್ಟ್; ಸಾಮಾಜಿಕ ಹೋರಾಟಗಾರರಾದ ಸ್ಟ್ಯಾನಿ ಪಿಂಟೋ ಪೋಲೀಸ್ ಠಾಣೆ ಭೇಟಿ










Actor Chetan Arrest : ನ್ಯಾಯಾಂಗ ನಿಂದನೆ ಆರೋಪ : ನಟ ಚೇತನ್ ರನ್ನು ವಶಕ್ಕೆ ಪಡೆದ ಪೊಲೀಸರು

ಬೆಂಗಳೂರು : ನ್ಯಾಯಾಧೀಶರ ವಿರುದ್ಧ ನಿಂದನೆ ಆರೋಪದಡಿ ಸ್ಯಾಂಡಲ್ ವುಡ್ ನಟ ಚೇತನ್ (Actor Chetan Arrest
 ) ರನ್ನು ಶೇಷಾದ್ರಿಪುರಂ ಪೊಲೀಸರು ಬಂಧಿಸಿದ್ದಾರೆ. ಇಂದು ಮಧ್ಯಾಹ್ನ ಚೇತನರನ್ನು ವಶಕ್ಕೆ ಪಡೆಯಲಾಗಿದೆ. ರಾಜ್ಯದಲ್ಲಿ ತಾರಕಕ್ಕೇರಿರುವ ಹಿಜಾಬ್ ಪ್ರಕರಣ ಹೈಕೋರ್ಟ್ ನಲ್ಲಿ ವಿಚಾರಣೆ ಹಂತದಲ್ಲಿದೆ. ಈ ಪ್ರಕರಣದ ವಿಚಾರಣೆ ತ್ರೀಸದಸ್ಯ ಪೀಠದಲ್ಲಿ ನಡೆಯುತ್ತಿದೆ. ಈ ತ್ರೀಸದಸ್ಯ ಪೀಠದ ಓರ್ವ ನ್ಯಾಯಮೂರ್ತಿಗಳಾಗಿರು ಕೃಷ್ಣ ದೀಕ್ಷಿತ್ ರ ವಿರುದ್ಧ ಚೇತನ್ ಅವಹೇಳನಕಾರಿ ಪೋಸ್ಟ್ ಹಾಕಿದ್ದರು.

ಫೇಸ್ ಬುಕ್ ನಲ್ಲಿ ನಟ ಚೇತನ್ ಫೆ.16 ರಂದು ಕೃಷ್ಣ ದಿಕ್ಷೀತ್ ರ ವಿರುದ್ಧ ಪೋಸ್ಟ್ ಹಾಕಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಚೇತನ್ ರನ್ನು ಶೇಷಾದ್ರಿಪುರಂ ಪೊಲೀಸರು ಬಂಧಿಸಿದ್ದಾರೆ. 21 ನೇ ಶತಮಾನದಲ್ಲೂ ನ್ಯಾಯಮೂರ್ತಿಗಳು ಸ್ತ್ರೀಯರ ಬಗ್ಗೆ ಹೊಂದಿರುವ ದೃಷ್ಟಿಕೋನ ಸರಿಯಲ್ಲ ಎಂಬರ್ಥದಲ್ಲಿ ನಟ ಚೇತನ್ ತೀರಾ ಅವಹೇಳನಕಾರಿಯಾಗಿ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದರು. ಅಲ್ಲದೇ ಅದೇ ನ್ಯಾಯಮೂರ್ತಿಗಳು ಈಗ ಹಿಜಾಬ್ ಪ್ರಕರಣದಲ್ಲಿ ವಿಚಾರಣೆ ನಡೆಸಿದ್ದಾರೆ ಎಂದು ಪೋಸ್ಟ್ ಹಾಕಿದ್ದರು.









ಇನ್ನು ನಟ ಚೇತನರನ್ನು (Actor Chetan Arrest) ಶೇಷಾದ್ರಿಪುರಂ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ‌. ಆದರೆ ಈ ಬಗ್ಗೆ ಆತನ ಕುಟುಂಬಸ್ಥರಿಗೆ ಯಾವುದೇ ಮಾಹಿತಿ ನೀಡಲಾಗಿಲ್ಲ ಎನ್ನಲಾಗುತ್ತಿದೆ. ಹೀಗಾಗಿ ಈ ವಿಚಾರಕ್ಕೆ ಚೇತನ್ ಪತ್ನಿ ಮೇಘಾ ಅಕ್ಷೇಪ ವ್ಯಕ್ತಪಡಿಸಿದ್ದು, ಫೇಸ್ ಬುಕ್ ನಲ್ಲಿ ಲೈವ್ ನಡೆಸಿ ಯಾವುದೇ ಮಾಹಿತಿ ನಡೆಯದೇ ಚೇತರನ್ನು ಬಂಧಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಅಲ್ಲದೇ ಈಗ ಚೇತನ್ ಪೋನ್ ಕೂಡ ರೀಚ್ ಆಗುತ್ತಿಲ್ಲ. ಶೇಷಾದ್ರಿಪುರಂ ಪೊಲೀಸ್ ಠಾಣೆಯಲ್ಲೂ ಚೇತನ್ ಇಲ್ಲ. ಎಲ್ಲಿದ್ದಾರೆ ಎಂಬ ಮಾಹಿತಿ ಯನ್ನು ನೀಡುತ್ತಿಲ್ಲ. ಪೊಲೀಸರ ವರ್ತನೆ ಅನುಮಾನ ಮೂಡಿಸುತ್ತಿದೆ ಎಂದು ಆರೋಪಿಸಿದ್ದಾರೆ.


ಇನ್ನೊಂದೆಡೆ ಚೇತನ್ ಬಂಧನದ ಸುದ್ದಿ ತಿಳಿದ ಹಾಗೂ ಮೇಘಾ ಚೇತನ್ ಲೈವ್ ನೋಡಿದ ಚೇತನ್ ಅಭಿಮಾನಿಗಳು ಪೊಲೀಸ್ ಠಾಣೆ ಎದುರು ಜಮಾಯಿಸುತ್ತಿದ್ದಾರೆ. ಪೊಲೀಸ್ ಠಾಣೆಯ ಎದುರು ಸದ್ಯ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ.

ಈ ಸಂದರ್ಭದಲ್ಲಿ ಸಾಮಾಜಿಕ ಹೋರಾಟಗಾರರಾದ ಸ್ಟ್ಯಾನಿ ಪಿಂಟೋ ಮತ್ತು ತಂಡದವರು ಶೇಷಾದ್ರಿಪುರಂ ಪೊಲೀಸ್ ಠಾಣೆಗೆ ಭೇಟಿ ನೀಡಿದ್ದರು ಮತ್ತು ಮಾನವ ಹಕ್ಕುಗಳನ್ನು ಉಲ್ಲಂಘನೆ ಮಾಡಿದ ಪೊಲೀಸ್ ಇಲಾಖೆಯ ಬಗ್ಗೆ ಮಾತನಾಡಿದರು ಕನ್ನಡಿಯಲ್ಲಿ ಬಂದರೆ ಆದಷ್ಟು ಬೇಗ ನಟ ಚೇತನ್ ರವರನ್ನು ಬಿಡುಗಡೆಗೊಳಿಸಬೇಕು ಎಂದು ತಿಳಿಸಿದರು ಈ ಸಂದರ್ಭದಲ್ಲಿ ಮೇಘಾ ಚೇತನ್ ಹಾಗೂ ಹಲವಾರು ಹೋರಾಟಗಾರರು ಮತ್ತು ಅಭಿಮಾನಿಗಳು ನೆರೆದಿದ್ದರು.

ಈ ಹಿಂದೆ ನಟ ಚೇತನ್ ಬ್ರಾಹ್ಮಣರನ್ನು ನಿಂದಿಸಿ ವಿವಾದಕ್ಕೆ ಗುರಿಯಾಗಿದ್ದರು. ಅಲ್ಲದೇ ಅವರ ವಿರುದ್ಧ ಬಸವನಗುಡಿ ಸೇರಿದಂತೆ ಹಲವೆಡೆ ಪ್ರಕರಣ ದಾಖಲಾಗಿತ್ತು. ಈಗ ಮತ್ತೊಂದು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡ ಪೊಲೀಸರು ಬಂಧಿಸಿದ್ದಾರೆ. ಪೊಲೀಸ್ ಠಾಣೆಯ ಬಳಿ ದಲಿತ ಸಂಘರ್ಷ ಸೇನೆ ಸೇರಿದಂತೆ ಹಲವರು ಪ್ರತಿಭಟನೆಗೆ ಮುಂದಾಗಿದ್ದಾರೆ.




Post a Comment

1 Comments

  1. President, Prime Minister, Chief Justice, judges all are human beings. They commit mistakes if they do wrong every citizens in a democratic country have right to criticize. When the Holy, very honest good people are criticized what the police and court do?

    ReplyDelete