ಪಂಜಿಮೊಗರು ಚರ್ಚ್ ಕಟ್ಟಡ ಕೆಡವಿ ಹಾಕಿದ ಪ್ರಕರಣ ಇಬ್ಬರು ಆರೋಪಿಗಳ ಬಂಧನ
ಕಾವೂರು ಠಾಣಾ ವ್ಯಾಪ್ತಿಯ ಪಂಜಿಮೊಗರಿನ ಒಂದಾಗಿ ಗುಡ್ಡೆ ಎಂಬಲ್ಲಿ ಚರ್ಚ್ ಮತ್ತು ಅಂಗನವಾಡಿ ಕಟ್ಟಡವನ್ನು ಕೆಡವಿದ ಪ್ರಕರಣದಲ್ಲಿ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
ಕಾವೂರು ಠಾಣಾ ವ್ಯಾಪ್ತಿಯ ಪಂಜಿಮೊಗರಿನ ಉರುಂದಾಡಿ ಗುಡ್ಡೆ ಎಂಬಲ್ಲಿ ಹೋಲಿ ಕ್ರಾಸ್ ಚರ್ಚ್ ಮತ್ತು ಅಂಗನವಾಡಿ ಕಟ್ಟಡವನ್ನು ಕೆಡವಿದ ಪ್ರಕರಣದಲ್ಲಿ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ
ಊರಿಂದಡಿ ಗುಡ್ಡೆ ನಿವಾಸಿ ಧನಂಜಯ (36) ಮತ್ತು ಬಜ್ಪೆ ನಿವಾಸಿ ಲತೀಶ್ (25) ಬಂಧಿತರು. ಈ ಬಗ್ಗೆ ಶಿಶು ಕಲ್ಯಾಣ ಇಲಾಖೆಯ ಅಧಿಕಾರಿ ಹರೀಶ್ ಕಾವೂರು ಠಾಣೆಗೆ ದೂರು ನೀಡಿದ್ದರು.
ಸದ್ರಿ ಜಾಗದಲ್ಲಿ ಅಂಗನವಾಡಿ ನಿರ್ಮಾಣಕ್ಕೆ 16.5 ಲಕ್ಷ ರೂ ಮಂಜೂರು ಹಾಗಿತ್ತು ಆದರೆ ತಾಶೀಲ್ದಾರ್ ಗೊತ್ತುಪಡಿಸಿದ ಜಾಗದಲ್ಲಿ ಹೋಲಿ ಕ್ರಾಸ್ ಚರ್ಚ್ ಕಟ್ಟಡ ಇರುವ ಬಗ್ಗೆ ಶಿಶು ಕಲ್ಯಾಣ ಅಧಿಕಾರಿ ಮತ್ತೆ ತಾಸಿಲ್ದಾರ್ ಗೆ ಪತ್ರ ಬರೆದು ಈ ಕಟ್ಟಡವನ್ನು ತೆರವುಗೊಳಿಸುವಂತೆ ಕೇಳಿಕೊಂಡಿದ್ದರು 5ರಂದು ಏಕಾಏಕಿ ಯಾರೋ ಬಂದು ಕಟ್ಟಡವನ್ನು ಒಡೆದು ಹಾಕಿದ್ದರು ಈ ಬಗ್ಗೆ ಅಧಿಕಾರಿ ಹರೀಶ್ ಕಾವೂರು ಠಾಣೆಗೆ ದೂರು ನೀಡಿ ಕಟ್ಟಡವನ್ನು ಒಡೆದುಹಾಕಲು ಯಾವುದೇ ಆದೇಶ ಆಗಿರುವುದಿಲ್ಲ, ಇದರ ಮಧ್ಯೆ ಯಾರೋ ಕಟ್ಟಡ ಹೊಡೆದು ಹಾಕಿದ್ದು ಕ್ರಮಕೈಗೊಳ್ಳಲು ದೂರಿನಲ್ಲಿ ತಿಳಿಸಿದ್ದರು ತನಿಖೆ ನಡೆಸಿದ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
ಆರೋಪಿ ಧನಂಜಯ ಅದೇ ಪರಿಸರದ ನಿವಾಸಿಯಾಗಿದ್ದು ಮಾಧ್ಯಮದ ಮುಂದೆ ಕಟ್ಟಡ ಹೊಡೆದ ಬಗ್ಗೆ ತಮಗೇನು ಗೊತ್ತಿಲ್ಲ ಎಂದು ಹೇಳಿಕೊಂಡಿದ್ದರು ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಕ್ರಿಶ್ಚಿಯನ್ ಬಾಂಧವರು ಘಟನೆ ಖಂಡಿಸಿ ಕೂಳೂರಿನಲ್ಲಿ ಪ್ರತಿಭಟನೆ ನಡೆಸಿದ್ದರು.
0 Comments