Hot Posts

6/recent/ticker-posts

ಪ್ರಶಸ್ತಿ ಪತ್ರದಲ್ಲಿ ಯೇಸು ಕ್ರಿಸ್ತ, ಮೇರಿ ಫೋಟೋ: ಹಿಂದೂ ವಿರೋಧಿ ನಡೆ ಎಂದ ಬಿಜೆಪಿ

 ಶಿಕ್ಷಣ ಇಲಾಖೆಯು ಕ್ರೀಡಾ ಕೂಟದ ಪ್ರಶಸ್ತಿ ಪತ್ರದಲ್ಲಿ ಕ್ರೈಸ್ತ ಧರ್ಮದ ಆಧಾರಕರ ಚಿತ್ರವನ್ನು ಬಳಸುವ ಮೂಲಕ ಇದೀಗ ಮತ್ತೊಮ್ಮೆ ವಿವಾದಕ್ಕೆ ಕಾರಣವಾಗಿದೆ. ಈಚೆಗಷ್ಟೇ ಶಿಕ್ಷಣ ಇಲಾಖೆಯು ಸರ್ಕಾರಿ ಶಾಲೆ ಹಾಗೂ ಸರ್ಕಾರಿ ಕಾಲೇಜುಗಳ ಮುಖ್ಯದ್ವಾರದಲ್ಲಿ ಜ್ಞಾನ ದೇಗುಲವಿದು ಕೈಮುಗಿದು ಒಳಗೆ ಬಾ ಎನ್ನುವ ಬದಲಾಗಿ, ಜ್ಞಾನ ದೇಗುಲವಿದು ಧೈರ್ಯವಾಗಿ ಪ್ರಶ್ನೆ ಮಾಡಿ ಎಂಬರ್ಥದಲ್ಲಿ ಸಾಲುಗಳನ್ನು ಬರೆಯಲಾಗಿತ್ತು. ಈ ಬದಲಾವಣೆಯು ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು.

ಮಕ್ಕಳ ಮನಸ್ಸಿನಲ್ಲಿ ರಾಜ್ಯ ಕಾಂಗ್ರೆಸ್‌ ಸರ್ಕಾರ ಇಲ್ಲದ ವಿಚಾರಗಳನ್ನು ತುಂಬುತ್ತಿದೆ ಎಂದು ವಿರೋಧ ಪಕ್ಷವಾದ ಬಿಜೆಪಿ ಸಹ ವಿರೋಧ ವ್ಯಕ್ತಪಡಿಸಿತ್ತು. ಇದೀಗ ಚಾಮರಾಜನಗರದಲ್ಲಿ ನಡೆದಿರುವ ಕ್ರೀಡಾಕೂಟದಲ್ಲಿ ಕ್ರೈಸ್ತ ಧರ್ಮದ ಯೇಸುಕ್ರಿಸ್ತ ಹಾಗೂ ಮೇರಿ ದೇವರ ಚಿತ್ರವಿರುವ ಪ್ರಶಸ್ತಿ ಪತ್ರಗಳನ್ನು ವಿತರಣೆ ಮಾಡಿರುವುದು ವಿವಾದಕ್ಕೆ ಕಾರಣವಾಗಿದೆ. ಪ್ರಶಸ್ತಿ ಪತ್ರದ ಎಡಭಾಗದಲ್ಲಿ ಹಾಗೂ ಬಲಭಾಗದಲ್ಲಿ ಕ್ರೈಸ್ತ ಧರ್ಮದ ಆರಾಧಕರ ಚಿತ್ರಗಳನ್ನು ಮುದ್ರಿಸಲಾಗಿದೆ.

ಏನಿದು ವಿವಾದ ? ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕು ಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟ 2024-2025 ಈಚೆಗೆ ನಡೆಯಿತು. ಈ ಪ್ರಶಸ್ತಿ ಪತ್ರದಲ್ಲಿ ಕ್ರೈಸ್ತ ಧರ್ಮದ ದೇವರ ಚಿತ್ರ ಇರುವ ಪ್ರಶಸ್ತಿ ಪತ್ರಗಳನ್ನು ಕ್ರೀಡಾ ಕೂಟದ ವಿಜೇತರಿಗೆ ವಿತರಣೆ ಮಾಡಲಾಗಿದ್ದು, ತೀವ್ರ ವಿರೋಧ ವ್ಯಕ್ತವಾಗದೆ.

ಚಾಮರಾಜನಗರ ಜಿಲ್ಲೆಯಲ್ಲಿ ಈಚೆಗೆ ನಡೆದಿರುವ ಹನೂರು ತಾಲ್ಲೂಕು ಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟವನ್ನು ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ ಕಾಲೇಜು), ಕ್ರಿಸ್ತರಾಜ ಪದವಿ ಪೂರ್ವ ಕಾಲೇಜು ಹನೂರು ಹಾಗೂ ಸೆಂಟ್ ಮೇರಿಸ್ ಸಂಯುಕ್ತ ಪದವಿ ಪೂರ್ವ ಕಾಲೇಜು ಮಾರ್ಟಳ್ಳಿ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿತ್ತು. ಆದರೆ, ಕ್ರೀಡಾ ಕೂಟದ ವಿಜೇತರಿಗೆ ಪ್ರಶಸ್ತಿ ಪ್ರಮಾಣ ಪತ್ರ ನೀಡುವ ಸಂದರ್ಭದಲ್ಲಿ ಕ್ರೈಸ್ತ ಧರ್ಮದ ಆರಾಧಕರ ಚಿತ್ರಗಳನ್ನು ಮುದ್ರಿಸಿ ವಿತರಣೆ ಮಾಡಲಾಗಿದೆ.

ಈ ಪ್ರಶಸ್ತಿ ಪತ್ರಗಳಿಗೆ ಖುದ್ದು ಚಾಮರಾಜನಗರ ಜಿಲ್ಲೆಯ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು ಹಾಗೂ ತಾಲ್ಲೂಕು ಮಟ್ಟದ ಕ್ರೀಡಾ ಕೂಟದ ಆಯೋಜಕರು ಸಹ ಸಹಿ ಮಾಡಿದ್ದಾರೆ. ಇದೇನಾ ಕಾಂಗ್ರೆಸ್‌ ಜಾತ್ಯತೀತತೆ: ಬಿಜೆಪಿ ಪ್ರಶ್ನೆ ಇದೇನಾ ಕಾಂಗ್ರೆಸ್‌ನ ಜಾತ್ಯಾತೀತತೆ ಎಂದು ವಿರೋಧ ಪಕ್ಷವಾದ ಬಿಜೆಪಿ ಪ್ರಶ್ನೆ ಮಾಡಿದೆ. ಈ ಸಂಬಂಧ ಸೋಷಿಯಲ್‌ ಮೀಡಿಯಾದಲ್ಲಿ ಟ್ವೀಟ್ ಮಾಡಿರುವ ವಿರೋಧ ಪಕ್ಷದ ನಾಯಕ ಆರ್‌. ಅಶೋಕ್‌ ಅವರು, ಶಾಲೆಗಳ ಮುಖ್ಯದ್ವಾರದಲ್ಲಿ "ಜ್ಞಾನ ದೇಗುಲವಿದು ಕೈಮುಗಿದು ಒಳಗೆ ಬಾ" ಎಂಬ ಸಾಲು ಬರೆಯುವುದು ಕೋಮುವಾದ ಎಂದು ಕಾಂಗ್ರೆಸ್‌ ವಾದಿಸಿತ್ತು. ಶಾಲಾ ಕಾಲೇಜುಗಳ ಆವರಣದಲ್ಲಿ ಗಣೇಶೋತ್ಸವ, ಶ್ರೀಕೃಷ್ಣ ಜನ್ಮಾಷ್ಟಮಿ ಆಚರಿಸುವುದು ಕೋಮುವಾದ. ಆದರೆ ಶಿಕ್ಷಣ ಇಲಾಖೆ ನೀಡುವ ಪ್ರಶಸ್ತಿ ಪತ್ರದಲ್ಲಿ ಯೇಸು ಕ್ರಿಸ್ತ ಹಾಗು ಮೇರಿ ಫೋಟೋ ಹಾಕುವುದು ಮಾತ್ರ ಜಾತ್ಯತೀತವೇ ಎಂದು ಪ್ರಶ್ನೆ ಮಾಡಿದ್ದಾರೆ.

ಇದು ಕಾಂಗ್ರೆಸ್‌ ಸರ್ಕಾರದ ನಿಜವಾದ ಜಾತ್ಯತೀತತೆ. ಕಾಂಗ್ರೆಸ್ ಪಕ್ಷಕ್ಕೆ ಜಾತ್ಯತೀತತೆ ಎಂಬುದು ಹಿಂದೂ ಧರ್ಮವನ್ನ ವಿರೋಧಿಸಲು, ಹಿಂದೂಗಳನ್ನ ದ್ವೇಷಿಸಲು ಇರುವ ಒಂದು ಮುಖವಾಡವೇ ಹೊರತು, ಮತ್ತೇನು ಅಲ್ಲ ಎಂದು ಹೇಳಿದ್ದಾರೆ. ಈ ಹಿಂದೂ ವಿರೋಧಿ ಕಾಂಗ್ರೆಸ್ ಸರ್ಕಾರಕ್ಕೆ ಕನ್ನಡಿಗರು ಶೀಘ್ರದಲ್ಲೆ ತಕ್ಕ ಪಾಠ ಕಲಿಸುತ್ತಾರೆ ಎಂದೂ ಅವರು ಎಚ್ಚರಿಸಿದ್ದಾರೆ.

   ಇಂತಹ ಹೆಚ್ಚಿನ ಸುದ್ದಿಗಳಿಗೆ ನಮ್ಮ ವಾಟ್ಸಪ್ ಚಾನೆಲ್ ಫಾಲೋ ಮಾಡಿ  

Post a Comment

0 Comments