Hot Posts

6/recent/ticker-posts

ಮಂಗಳೂರಿನಲ್ಲಿ ಕ್ರೈಸ್ತ ಬಾಂಧವರಿಂದ ನಡೆದ ಹೋರಾಟದ ಸಂಪೂರ್ಣ ವರದಿ

ಮಾತಾಂತರ  ನಿಷೇದ ಕಾಯಿದೆ, ಚರ್ಚ್, ಪ್ರಾರ್ಥನಾ ಮಂದಿರ  ಧ್ವಂಸ, ಮತಾಂತರ ಎಂಬ ಅಪಪ್ರಚಾರದ  ವಿರುದ್ಧ ಕ್ರೈಸ್ತ ಬಾಂಧವರಿಂದ ಬೃಹತ್ ಪ್ರತಿಭಟನೆ.




ಸ್ಥಳ. ವಲಯದ  ಎಲ್ಲಾ ಮುಖ್ಯ  ರಸ್ತೆಗಳಲ್ಲಿ,( ಮಂಗಳೂರು ದಕ್ಷಿಣ ವಲಯದ ಹತ್ತು ಚರ್ಚ್ ವ್ಯಾಪ್ತಿಯ ಮುಖ್ಯ ರಸ್ತೆಗಳಲ್ಲಿ, ಕಲ್ಲಪ್ಪು, ತೊಕ್ಕೊಟ್, ನಿತ್ಯಾಧರ್  ನಗರ, ಕುತ್ತಾರ್, ಯೇನೋ ಪಾಯ  ಆಸ್ಪತ್ರೆ, ಕೆ. ಎಸ್. ಹೆಗ್ಡೆ ಆಸ್ಪತ್ರೆ, ದೇರಳಕಟ್ಟೆ, ನಾಟೆಕಲ್, ತಿಬ್ಲೆಪದವ್, ಅಸೈಗೋಳಿ, ಗಣೇಷ್ ಮಹಲ್, ಕೊಣಾಜೆ, ಗ್ರಾಮ ಚಾವಡಿ, ಅಮ್ಮೆಂಬಳ, ಚೇಳೂರ್, ಪುಚ್ಚೆ ಕಟ್ಟೆ, ಮುಡಿಪು, ವಿಜಯಡ್ಕ, ರಾಣಿಪುರ, ಎಲ್ಯಾರ್ ಪದವ್ 

ಕರ್ನಾಟಕ ಸರ್ಕಾರ ಜಾರಿಗೆ ತರಲಿಚ್ಚಿಸುವ ಮತಾಂತರ ನಿಷೇಧ ಕಾಯ್ದೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು ಆದೇಶಿಸಿರುವ ಕ್ರೈಸ್ತ ಸಮುದಾಯದ ಚರ್ಚುಗಳು ಮತ್ತು ಸಂಘ ಸಂಸ್ಥೆಗಳ ಗಣತಿ ಕ್ರೈಸ್ತ ಪ್ರಾರ್ಥನಾ ಮಂದಿರಗಳ ಧ್ವಂಸ ಹಾಗೂ ಕ್ರೈಸ್ತರ ಮೇಲಿನ ಹಲ್ಲೆಯನ್ನು ಖಂಡಿಸಿ ಮಂಗಳೂರು ದಕ್ಷಿಣ ಸಂತ ಜೋಸೆಫ್ ವಾಜ್ ವಲಯ ವತಿಯಿಂದ ಮಾರ್ಚ್ 2 ರಂದು ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಯಿತು.

ಸರ್ಕಾರವು ಮತಾಂತರ ನಿಷೇಧ ಕಾಯ್ದೆಯನ್ನು ಜಾರಿಗೊಳಿಸಲು ಚಿಂತನೆ ನಡೆಸುತ್ತಿದ್ದು ಇದನ್ನು ಕರ್ನಾಟಕದ ಸಮಸ್ತ ಕ್ರೈಸ್ತ ಸಮುದಾಯವು ಒಮ್ಮನಸ್ಸಿನಿಂದ ವಿರೋಧಿಸುತ್ತವೆ ಈಗಾಗಲೇ ನಮ್ಮ ಸಂವಿಧಾನವು ಪ್ರಜೆಗಳಿಗೆ ಯಾವುದೇ ಧರ್ಮವನ್ನು ಪ್ರತಿಪಾದಿಸಲು ಆಚರಿಸಲು ಮತ್ತು ಅದನ್ನು ಪ್ರಕಟಿಸಲು ಹಕ್ಕುಗಳನ್ನು ನೀಡಿದೆ ರಾಜ್ಯದಲ್ಲಿ ಮತಾಂತರ ನಿಷೇಧ ಕಾಯ್ದೆಯನ್ನು ಯಾವುದೋ ಒಂದೆರಡು ಘಟನೆಗಳನ್ನು ಆಧಾರವಾಗಿಟ್ಟುಕೊಂಡು ಇಡೀ ಸಮುದಾಯವನ್ನು ದೂರುವುದು ಸರಿಯಲ್ಲ.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು ತನ್ನ ಸಭೆಯೊಂದರಲ್ಲಿ ರಾಜ್ಯದಲ್ಲಿನ ಕ್ರೈಸ್ತ ಸಮುದಾಯದ ಚರ್ಚುಗಳ ಮತ್ತು ಧಾರ್ಮಿಕ ಸಂಘಸಂಸ್ಥೆಗಳ ಗಣತಿಯನ್ನು ನಡೆಸಬೇಕೆಂದು ಆದೇಶಿಸಿದ್ದು ನಮ್ಮ ಸಮುದಾಯವನ್ನು ಮಾತ್ರ ಗುರಿಯಾಗಿಸಿ ಗಣತಿಯನ್ನು ನಡೆಸಲು ಆದೇಶಿಸಿರುವುದು ಯಾಕೆ ಭಾರತದ ಮೊದಲ ಜನಗಣತಿಯಿಂದ ಇಲ್ಲಿಯವರೆಗೂ ಸಹ ದೇಶದಲ್ಲಿ ಸಮುದಾಯದ ಜನಸಂಖ್ಯೆ ಅಂಕಿಅಂಶಗಳು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ಬಳಿ ಇವೆ
ಭಾರತದಲ್ಲಿ ಮತಾಂತರ ನಡೆಯುತ್ತಿದೆ ಎಂದು ಆರೋಪಿಸುವವರು ಅಂಕಿ-ಅಂಶಗಳನ್ನು ಒಮ್ಮೆ ಪರಿಶೀಲಿಸಲಿ. ಮತಾಂತರವು ನಿಜವೇ ಆಗಿದ್ದರೆ ನಮ್ಮ ಸಮುದಾಯದ ಸಂಖ್ಯೆ ಇಷ್ಟೊತ್ತಿಗೆ ಅಧಿಕವಾಗಿ ಇರಬೇಕಿತ್ತು ಆದರೆ ದೇಶದ ಸ್ವಾತಂತ್ರ್ಯದ ನಂತರವೂ ಸಹ ಜನಸಂಖ್ಯೆಯಲ್ಲಿ ನಮ್ಮ ಸಮುದಾಯದ ಸಂಖ್ಯೆ ಕೇವಲ ಶೇಕಡಾ 1.8 ರಷ್ಟು ಮಾತ್ರವಿದೆ.
ರಾಜ್ಯ ಹಾಗೂ ರಾಷ್ಟ್ರದಲ್ಲಿ ಕ್ರೈಸ್ತ ಸಮುದಾಯವು ಸಾವಿರಾರು ಶಾಲಾ-ಕಾಲೇಜುಗಳ ಮತ್ತು ಆಸ್ಪತ್ರೆಗಳ ಮೂಲಕ ನಿಸ್ವಾರ್ಥ ಸೇವೆಯನ್ನು ಮಾಡುತ್ತಿದೆ ಇತಿಹಾಸದಲ್ಲಿ ಕ್ರೈಸ್ತ ಶಾಲಾ-ಕಾಲೇಜುಗಳಲ್ಲಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದುಕೊಂಡ ಕ್ರೈಸ್ತೇತರಲ್ಲಿ ಯಾರಾದರೂ ಒಬ್ಬರು ತನ್ನನ್ನು ಮತಾಂತರ ಗೊಳಿಸಲಾಗಿದೆ ಎಂಬುದನ್ನು ಸಾಬೀತುಪಡಿಸಲು ಮತಾಂತರ ನಿಷೇಧ ಕಾಯ್ದೆ ಜಾರಿಯಾದರೆ ಕೋಮುವಾದಿಗಳ ಕೈಗೆ ಸಿಕ್ಕಿ ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯವೆಸಗಲು ಸಾಧ್ಯವಾಗಬಹುದು ಮೂಲಕ ಸಮಾಜದಲ್ಲಿ ಶಾಂತಿಯನ್ನು ಕದಡಿಸಲು ಪ್ರಯತ್ನಿಸಬಹುದು.
ಕರ್ನಾಟಕದಲ್ಲಿ ಕ್ರೈಸ್ತರ ಪ್ರಾರ್ಥನಾ ಮಂದಿರ ಹಾಗೂ ಕ್ರೈಸ್ತರ ಮೇಲೆ ನಡೆಯುವ ದೌರ್ಜನ್ಯ ಕೋಲಾರದಲ್ಲಿ ಯೇಸುಕ್ರಿಸ್ತರ ಮೂರ್ತಿ ಹಾಗೂ ಶಿಲುಬೆಯ ನಾಶ 49 ವರ್ಷಗಳ ಇತಿಹಾಸವುಳ್ಳ ಸಂತ ಅಂತೋಣಿ ಪ್ರಾರ್ಥನಾ ಮಂದಿರ ಹಾಗೂ 40 ವರ್ಷದಿಂದ ಪ್ರಾರ್ಥನೆ ನಡೆಸುತ್ತಿದ್ದ ಕೆಂಗೇರಿಯಲ್ಲಿರುವ ದೇವಾಲಯವನ್ನು ನಿರ್ಮಾಣ ಮಾಡಿ ಕ್ರೈಸ್ತರ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿದೆ
ಕೋರ್ಟಿನಿಂದ ತಡೆಯಾಜ್ಞೆ ಇದ್ದರೂ ಪ್ರಾರ್ಥನಾ ಮಂದಿರಗಳನ್ನು ಮಾಡಿರುತ್ತಾರೆ ಪ್ರಾರ್ಥನಾ ಮಂದಿರಗಳನ್ನು ಕೇಳಬಾರದೆಂದು ಹೊಸ ಕಾನೂನನ್ನು ಸರಕಾರ ಜಾರಿಗೆ ತಂದಿದ್ದರೂ ಹಿತಾಸಕ್ತಿಗಳು ಕಾನೂನಿನ ವಿರುದ್ಧವಾಗಿ ಕಾರ್ಯಾಚರಣೆ ಮಾಡಿರುತ್ತಾರೆ, 
ಮಾತ್ರವಲ್ಲ 45 ವರ್ಷ ಇತಿಹಾಸ ಇರುವ ಚಿಕ್ಕಬಳ್ಳಾಪುರ ಜಿಲ್ಲೆಯ ಸೊಸೆ ಪಾಳ್ಯದಲ್ಲಿ ಇರುವ ಸಂತ ಅಂತೋಣಿಯವರ ಪ್ರತಿಮೆ ಮಾಡಿದ್ದಾರೆ ಅಷ್ಟು ಮಾತ್ರವಲ್ಲ 40 ವರ್ಷ ಇತಿಹಾಸ ಇರುವ ಕೊಳ್ಳೇಗಾಲ ಬಳಿ ಇರುವ ಏಸುಕ್ರಿಸ್ತನ ಪ್ರತಿಮೆಯನ್ನು ಕೂಡ ಧ್ವಂಸ ಮಾಡಿದ್ದಾರೆ.
ಅಲ್ಲದೆ ಅಲ್ಲಲ್ಲಿ ಮತಾಂತರ ಆಗಿದೆ ಎಂದು ಶಂಕೆ ವ್ಯಕ್ತಪಡಿಸಿ ಹಲವು ದೌರ್ಜನ್ಯಗಳು ನಡೆಯುತ್ತಿವೆ ಸಾಕ್ಷ್ಯಗಳನ್ನು ಸೃಷ್ಟಿಸುವ ಉದ್ದೇಶದಿಂದ ಅಲ್ಲಲ್ಲಿ ಸುಳ್ಳು ದೂರುಗಳನ್ನು ಮತ್ತು ಇತರ ಇಲಾಖೆಗಳಿಗೆ ನೀಡಿ ಸಮುದಾಯದವರನ್ನು ಹಾಗೂ ಕ್ರೈಸ್ತ ಸಂಸ್ಥೆಗಳನ್ನು ದೌರ್ಜನ್ಯ ಮಾಡಿರುತ್ತಾರೆ.
ಕರ್ನಾಟಕದಲ್ಲಿ ವ್ಯವಸ್ಥಿತವಾಗಿ ಕ್ರೈಸ್ತರ ಮೇಲೆ ಮತಾಂತರದ ಆರೋಪಗಳನ್ನು ಹಾಕುತ್ತಲೇ ಬರುತ್ತಿದ್ದಾರೆ.

ಯಾವುದೇ ಆಧಾರವಿಲ್ಲದೆ ಸುಳ್ಳು ಕೇಸುಗಳನ್ನು ದಾಖಲಿಸುತ್ತಾ ಕ್ರೈಸ್ತರ ಮೇಲೆ ಆರೋಪಗಳನ್ನು ಹಾಕುತ್ತಿದ್ದಾರೆ ಇದೊಂದು ವ್ಯವಸ್ಥಿತವಾದ ಕ್ರೈಸ್ತರ ಮೇಲೆ ನಡೆಯುತ್ತಿರುವ ಷಡ್ಯಂತ್ರ, ದಿನದಿಂದ ದಿನಕ್ಕೆ ಕ್ರೈಸ್ತರ ಮೇಲೆ ನಡೆಯುತ್ತಿರುವ ದಬ್ಬಾಳಿಕೆ ಸುಳ್ಳು ಆರೋಪಗಳು ಅವ್ಯಾಚ ಪದಗಳಿಂದ ನಿಂದಿಸುವುದು,
ಕ್ರೈಸ್ತರ ಪತ್ರಿಕೆಗಳನ್ನು ಬೈಬಲ್ ಗಳನ್ನು ಸುುಟ್ಟ ಹಾಕುವುದು, ಚರ್ಚುಗಳ ಮೇಲೆ ದಾಳಿ, ಕ್ರೈಸ್ತ ಪಾದ್ರಿಗಳ ಮತ್ತು ದೇವ ಸೇವಕರ ಮೇಲೆ ದಾಳಿ ಮಾಡುವುದು ಮಾತ್ರವಲ್ಲ ಇನ್ನೂ ಅನೇಕ ಕ್ರೈಸ್ತ ಧರ್ಮಕ್ಕೆ ದಕ್ಕೆ ಬರುವಂತ ಕಾರ್ಯಗಳನ್ನು ಮಾಡುತ್ತಲೇ ಬಂದಿದ್ದಾರೆ ಇದೊಂದು ವ್ಯಾಪಕವಾದ ಜಾಲ ಕ್ರೈಸ್ತರೇ ಇವರಿಗೆ ಗುರಿ,
ಈ ದೇಶದಲ್ಲಿ ರಾಜ್ಯದಲ್ಲಿ ಕ್ರೈಸ್ತರಿಗೆ ಅವರ ಧರ್ಮದ ಆಚರಣೆಗಳನ್ನು ಮತ್ತು ಸಂವಿಧಾನದ ಪ್ರಕಾರ ಇರುವ ಹಕ್ಕುಗಳು ಸಿಗುತ್ತಿಲ್ಲ ಹಾಗಾದರೆ ಕ್ರೈಸ್ತರಿಗೆ ನ್ಯಾಯ ಕೊಡುವವರು ಯಾರು..? ಕ್ರೈಸ್ತರ ಮೇಲೆ ಇರುವ ಸುಳ್ಳು ಆರೋಪಗಳು ನಿಲ್ಲುವುದು ಯಾವಾಗ..? ಮತಾಂತರ ನಡೆಯುವುದು ಕಾನೂನಿನ ಚೌಕಟ್ಟಿನಲ್ಲಿ ಎಂದು ಇವರಿಗೆ ತಿಳಿಯುವುದು ಯಾವಾಗ..?

ಕಾನೂನಿಗೆ ಕಣ್ಣಿಲ್ಲ ಎಂದು ಹೇಳುವುದು ಸತ್ಯವಾಗಿದೆ.. 
ಆದುದರಿಂದ ಸರ್ಕಾರದ ಹಿಂದುಳಿದ ವರ್ಗಗಳ ಇಲಾಖೆಯ ಆದೇಶವನ್ನು ಹಿಂಪಡೆಯಬೇಕೆಂದು ಮತಾಂತರ ನಿಷೇಧ ಕಾಯ್ದೆಯ ಚಿಂತನೆಯನ್ನು ಕೈಬಿಡಬೇಕೆಂದು ಕ್ರೈಸ್ತರ ಮೇಲೆ ದಬ್ಬಾಳಿಕೆ ನಡೆಸುವ ದುಷ್ಟಶಕ್ತಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಲು ಅವರಿಗೆ ಸಂಸ್ಥೆಗಳು ಮತ್ತು ಕ್ರೈಸ್ತ ಪ್ರಾರ್ಥನಾ ಮಂದಿರಗಳಿಗೆ ಸೂಕ್ತ ರಕ್ಷಣೆ ನೀಡಬೇಕೆಂದು ಆಗ್ರಹಿಸಿ ಬೃಹತ್ ಪ್ರತಿಭಟನೆ ನಡೆಸಲಾಯಿತು.

ಬಂಟ್ವಾಳದಲ್ಲಿ ಕ್ರೈಸ್ತರಿಂದ ಧಿಕ್ಕಾರ ಘೋಷಣೆ




KCS MEDIA
ಮುಂದಿನ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಲು ಕೆಸಿಎಸ್ ಮೀಡಿಯಾ ಯುಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿ

Post a Comment

1 Comments