ಪಂಜಿಮೊಗರು ಕ್ರೈಸ್ತ ಪ್ರಾರ್ಥನಾ ಮಂದಿರ ದ್ವಂಸ ದುಷ್ಕರ್ಮಿಗಳನ್ನು ಬಂಧಿಸಿ: DYFI
ಪಂಜಿಮೊಗರು ಪ್ರದೇಶದ ಉರುಂದಾಡಿ ಗುಡ್ಡೆಯಲ್ಲಿ ಎಂಬಲ್ಲಿ ಖುರ್ಸು ಗುಡ್ಡೆ ಎಂದೇ ಜನಜನಿತವಾಗಿರುವ ಕಳೆದ 40 ವರ್ಷಗಳಿಂದ ಕ್ರೈಸ್ತರು ಪ್ರಾರ್ಥಾನಾ ಸ್ಥಳವಾಗಿ ಬಳಸುತ್ತಿದ್ದ ಜಾಗದಲ್ಲಿದ್ದ ಕಟ್ಟಡವನ್ನು ದುಷ್ಕರ್ಮಿಗಳು ಏಕಾಏಕಿ ನೆಲಸಮ ಮಾಡಿರುವುದು ಖಂಡನೀಯ. ಕಟ್ಟಡದ ಯಾಥಾಸ್ಥಿತಿ ಕಾಪಾಡುವಂತೆ ನ್ಯಾಯಾಲಾಯ ಆದೇಶ ಉಲ್ಲಂಘಿಸಿ ದ್ವಂಸ ಮಾಡಿದವರ ವಿರುದ್ದ ಕ್ರಮ ಹಾಗೂ ಇಂತಹ ಕೃತ್ಯಗಳಿಗೆ ಕುಮ್ಮಕ್ಕು ನೀಡಿದವರ ವಿರುದ್ದವೂ ಕ್ರಮ ಜರುಗಿಸುವಂತೆ DYFI ಪಂಜಿಮೊಗರು ಘಟಕ ಆಗ್ರಹಿಸುತ್ತದೆ.
ಕಳೆದ ನವೆಂಬರ್ ತಿಂಗಳಲ್ಲಿ ಈ ಕಟ್ಟಡದಲ್ಲಿ ಮತಾಂತರ ಎಂಬ ಪುಕಾರ ಎಬ್ಬಿಸಿ ಸಂಘಪರಿವಾರದಿಂದ ಪ್ರದೇಶದ ಶಾಂತಿ ಕದಡುವ ವ್ಯವಸ್ಥಿತ ಷಡ್ಯಂತ್ರ ನಡೆಸಲಾಗಿತ್ತು. ಆ ಸಂಧರ್ಭದಲ್ಲಿ ಸ್ಥಳೀಯ ಜಾತ್ಯಾತೀತ ಪಕ್ಷದಿಂದ ಆರಿಸಿ ಬಂದ ಜನಪ್ರತಿನಿಧಿ ಮೌನವಾಗಿದ್ದು ಸ್ಥಳೀಯರನ್ನು ಜೊತೆಗೂಡಿಸಿ ಮಾತುಕತೆಯಾಗಲಿ, ಸೌಹಾರ್ದತೆಯಿಂದ ಪರಿಹಾರ ಕಂಡುಕೊಳ್ಳವುದರಾಗಲಿ ವಿಫಲವಾಗಿದ್ದು. ಸಂಘ ಪರಿವಾರವನ್ನು ಎದುರು ಹಾಕಿಕೊಳ್ಳಲಾಗದೆ ಧಾರ್ಮಿಕ ವಿಚಾರದಲ್ಲಿ ತಲೆಹಾಕಲ್ಲ ಎಂದು ದೂರ ನಿಂತಿದ್ದು ದುಷ್ಕರ್ಮಿಗಳು ಇಷ್ಟೊಂದು ಮುಂದುವರಿಯಲು ಪ್ರಮುಖ ಕಾರಣವಾಗಿದೆ..
40 ವರ್ಷಗಳ ಇತಿಹಾಸ ಇರುವ ಖುರ್ಸುಗುಡ್ಡೆ ಪ್ರೇಶದಲ್ಲಿದ್ದ ಪ್ರಾರ್ಥನಾ ಕೇಂದ್ರದ ಕಟ್ಟಡದಲ್ಲಿ ಅಂಗನವಾಡಿಗೆ ಅವಕಾಶ ನೀಡಿದ್ದು ಹೊಸ ಅಂಗನವಾಡಿ ಕಟ್ಟಡ ನಿರ್ಮಾಣ ಪ್ರಾರಂಭವಾಗುವುದರಿಂದ ಹೋಲಿ ಕ್ರಾಸ್ ಕಟ್ಟಡ ಸಮಿತಿ ತನ್ನ ನಾಮಫಲಕ ಹಾಕಿದ್ದು ಇದನ್ನು ಬಳಸಿ ಅಂಗನವಾಡಿ ಕೇಂದ್ರದಲ್ಲಿ ಮತಾಂತರ ಎಂದು ಸಂಘ ಪರಿವಾರ ಗುಲ್ಲೆಬ್ಬಿಸಿತ್ತು ಹಾಗೂ ಕಟ್ಟಡದ ಹತ್ತಿರದಲ್ಲೇ ಹಿಂದೂ ಧರ್ಮ, ದೈವದ ವಿಚಾರ ಮುಂದಿಟ್ಟು ವಿವಾದ ಹುಟ್ಟುಹಾಕಲು ಪ್ರಯತ್ನಿಸಿತ್ತು. ಆದರೆ ಅವರು ಬಯಸಿದಂತೆ ವಿವಾದ ಮಾಡದೆ ಪ್ರದೇಶದ ಜನ ಸೌಹಾರ್ದತೆ ಕಾಪಾಡುವ ನಿಟ್ಟಿನಲ್ಲಿ ಮೌನ ವಹಿಸಿದ್ದರು ಹಾಗೂ ಕ್ರೈಸ್ತರು ತಮ್ಮ ಧಾರ್ಮಿಕ ಕಟ್ಟಡ ಪ್ರದೇಶ ಉಳಿಸುವ ನಿಟ್ಟಿನಲ್ಲಿ ಕಾನೂನಾತ್ಮಕ ರೀತಿಯಲ್ಲಿ ಕ್ರಮ ಕೈಗೊಂಡಿದ್ದರು. ಪ್ರಕರಣ ನ್ಯಾಯಾಲಯದಲ್ಲಿರುವಾಗಲೇ ಈ ಹಿಂದೆ ವಿವಾದ ಮಾಡಿ ಯಾವುದೇ ಪ್ರಯೋಜನ ಆಗದೆ ಹತಾಶರಾದವರು ಕಟ್ಟಡವನ್ನು ದ್ವಂಸ ಮಾಡಿದ್ದಾರೆಂದು ಸ್ಥಳೀಯರು ಆರೋಪಿಸಿದ್ದು.. ಪ್ರದೇಶದ ಹಾಗೂ ಜಿಲ್ಲೆಯ ಶಾಂತಿ ಸೌಹಾರ್ದತೆಗೆ ದಕ್ಕೆ ತರುವಂತಹ ಘಟನೆ ಇದಾಗಿದ್ದು, ಇಂತವರನ್ನು ಬಂಧಿಸಿ, ಕಠಿಣ ಕ್ರಮ ಕೈಗೊಳ್ಳಬೇಕೆಂದು DYFI ಪಂಜಿಮೊಗರು ಘಟಕ ಆಗ್ರಹಿಸುತ್ತದೆ..
ಮುಂದಿನ ದಿನಗಳಲ್ಲಿ ನ್ಯಾಯಯುತ ಹೋರಾಟದಲ್ಲಿ DYFI ಪಂಜಿಮೊಗರು ಘಟಕ ಬೆಂಬಲಿಸಲಿದೆ ಎಂದು dyfi ಪಂಜಿಮೊಗರು ಘಟಕ ಅದ್ಯಕ್ಷರಾದ ಚರಣ್ ಶೆಟ್ಟಿ, ಕಾರ್ಯದರ್ಶಿ ಸಂತೋಷ್ ಡಿಸೋಜ ತಿಳಿಸದ್ದಾರೆ..
3 Comments
I request put my name. I will work on properly when time comes.
ReplyDeleteA good Lesson for Christians.
ReplyDeleteWhat u mean by good lesson for Christian?
Delete