ಭಿತ್ತಿಪತ್ರವನ್ನು ಹಾಗೂ ಪುಸ್ತಕವನ್ನು ಇಟ್ಟು ದುಷ್ಕೃತ್ಯ ಮಾಡಿದವರನ್ನು ಹಿಡಿದು ಕೂಡಲೇ ಬಂಧಿಸಬೇಕು
ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸದಾಶಿವ ಉಳ್ಳಾಲ್ ರವರ ಮಾರ್ಗದರ್ಶನದಲ್ಲಿ ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾದ ಅಲ್ವಿನ್ ಡಿಸೋಜ ರವರ ನೇತ್ರತ್ವದಲ್ಲಿ ದಿನಾಂಕ 24.09.2021 ರಂದು ನಡೆದ ಘಟನೆಯ ಪ್ರಯುಕ್ತ ಮಂಗಳೂರು ವಿಧಾನಸಭಾ ಕ್ಷೇತ್ರದ ಸೋಮೇಶ್ವರ ಗ್ರಾಮದ ರೈಲ್ವೆ ನಿಲ್ದಾಣ ಹಿಂದುಗಡೆ ಇರುವ ಮನೆಗಳ ಗೇಟ್ ಮತ್ತು ಕಂಪೌಂಡ್ ಗಳಲ್ಲಿ ಕ್ರೈಸ್ತ ಸಮುದಾಯದವರು ಪುಸ್ತಕ ಮತ್ತು ಬಿತ್ತಿ ಪತ್ರಗಳನ್ನು ಹಿಂದೂ ಸಮಾಜದ ಬಾಂಧವರನ್ನು ಮತಾಂತರ ಮಾಡಲು ಇಟ್ಟಿರುತ್ತಾರೆ ಎಂದು ವದಂತಿ ಹರಡಿದ ಹಿನ್ನೆಲೆಯಲ್ಲಿ, ಭಿತ್ತಿಪತ್ರವನ್ನು ಹಾಗೂ ಪುಸ್ತಕವನ್ನು ಇಟ್ಟು ದುಷ್ಕೃತ್ಯ ಮಾಡಿದವರನ್ನು ಹಿಡಿದು ಕೂಡಲೇ ಬಂಧಿಸಬೇಕು. ಇಲ್ಲಸಲ್ಲದ ಆರೋಪವನ್ನು ಕ್ರೈಸ್ತ ಸಮುದಾಯದ ಮೇಲೆ ಹೊರಿಸಬಾರದು.ಉಳ್ಳಾಲ ವಿಧಾನಸಭಾ ಕ್ಷೇತ್ರದಲ್ಲಿ ಸೌಹಾರ್ದತೆ ಹಾಗೂ ಶಾಂತಿ ಕೆಡುವಂತಹ ಹುನ್ನಾರ ನಡೆದಿರುವುದರಿಂದ, ತಪ್ಪಿಸ್ಥರನ್ನು ಬಂಧಿಸಿ ಸೂಕ್ತ ಕ್ರಮ ಕೈಗೊಳ್ಳಬೇಕಾಗಿ ಉಳ್ಳಾಲ ಅರಕ್ಷಕರ ಠಾಣಾ ವೃತ್ತ ನಿರೀಕ್ಷಕರಿಗೆ ಮನವಿ ಮಾಡಿರುತ್ತಾರೆ
ಕೆ.ಪಿ.ಸಿ.ಸಿ ಅಲ್ಪ ಸಂಖ್ಯಾತ ಘಟಕದ ಸಂಯೋಜಕರಾದ ಡೆನ್ನಿಸ್ ಡಿಸೋಜ, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಹಿಂದುಳಿದ ವರ್ಗಗಳ ಅಧ್ಯಕ್ಷ ದೀಪಕ್ ಪಿಲಾರ್, ಕಿಸಾನ್ ಘಟಕದ ಅಧ್ಯಕ್ಷರಾದ ಪುರುಷೋತ್ತಮ್ ಶೆಟ್ಟಿ ಪಿಲಾರ್ , ಸೇವಾ ದಳದ ಅಧ್ಯಕ್ಷರಾದ ನಾಗೇಶ್ ಶೆಟ್ಟಿ ತೊಕ್ಕೋಟ್ಟು, ಉಳ್ಳಾಲ ಬ್ಲಾಕ್ ಯೂತ್ ಕಾಂಗ್ರೆಸ್ ಅಧ್ಯಕ್ಷರಾದ ಫಿರೋಝ್ ಮಲಾರ್, ಮಹಿಳಾ ಘಟಕದ ಅಧ್ಯಕ್ಷರಾದ ದೇವಕಿ ಆರ್.ಉಳ್ಳಾಲ್, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಲ್ಪ ಸಂಖ್ಯಾತ ಘಟಕದ ಸಂಘಟನಾ ಕಾರ್ಯದರ್ಶಿ ಪ್ರಕಾಶ್ ಪಿಂಟೋ, ಉಳ್ಳಾಲ ಬ್ಲಾಕ್ ಯೂತ್ ಇಂಟಕ್ ಅಧ್ಯಕ್ಷರಾದ ವಿಶಾಲ್ ಕೊಲ್ಯ, ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ಪ್ರಧಾನ ಕಾರ್ಯದರ್ಶಿ ದಿನೇಶ್ ಕುಂಪಲ, ಉಳ್ಳಾಲ ನಗರ ಕಾಂಗ್ರೆಸ್ ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷರಾದ ರಿಚರ್ಡ್ ವೇಗಸ್, ಮುನ್ನೂರು ಗ್ರಾಮ ಕಾಂಗ್ರೆಸ್ ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷರಾದ ನವೀನ್ ಡಿಸೋಜ, ಮಾಜಿ ತಾಲೂಕು ಪಂಚಾಯತ್ ಸದಸ್ಯೆ ವಿಲ್ಮಾ ಡಿಸೋಜ ಮೊದಲಾದವರು ಉಪಸ್ಥಿತರಿದ್ದರು.

0 Comments