Hot Posts

6/recent/ticker-posts

ಮಂಗಳೂರಲ್ಲಿ ಮತಾಂತರ ವದಂತಿ: ಬೆಸ್ತುಬಿದ್ದ ಸಂಘಪರಿವಾರ ಕಾರ್ಯಕರ್ತರು

ಮಂಗಳೂರು, ಸೆ.25: ನಗರದಲ್ಲಿ ಮನೆಯೊಂದಕ್ಕೆ ವ್ಯಕ್ತಿಯೊಬ್ಬರು ಬಂದದ್ದನ್ನು ತಪ್ಪಾಗಿ ಗ್ರಹಿಸಿದ ಸ್ಥಳೀಯರು, ಇದು ಮತಾಂತರ ಎಂದು ವದಂತಿ ಹಬ್ಬಿಸಿದ ಘಟನೆ ಕೊಂಚಾಡಿಯಲ್ಲಿ ಶನಿವಾರ ವರದಿಯಾಗಿದೆ.


ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಕಾವೂರು ಪೊಲೀಸರು ಪರಿಶೀಲನೆ ನಡೆಸಿದರು. ಕೊನೆಗೆ ಇದು ಮತಾಂತರ ಪ್ರಕರಣವಲ್ಲ, ಬಂದಿದ್ದ ವ್ಯಕ್ತಿ ಪರಿಚಯಸ್ಥರೇ ಆಗಿದ್ದು, ಮತಾಂತರವಲ್ಲ. ಮನೆಯು ಕ್ರಿಶ್ಚಿಯನ್ನರಿಗೆ ಸೇರಿದ್ದು, ಮನೆಗೆ ಬಂದ ಅತಿಥಿಯೂ ಅದೇ ಸಮುದಾಯಕ್ಕೆ ಸೇರಿದವರು ಎನ್ನುವುದು ವಿಚಾರಣೆ ವೇಳೆ ತಿಳಿದುಬಂದಿದೆ ಎಂದು ಪೊಲೀಸರು ಖಚಿತಪಡಿಸಿದ್ದಾರೆ.

Post a Comment

0 Comments