ಕ್ರಿಶ್ಚಿಯನ್ ವಿರೋಧಿಗಳನ್ನು
ಹದ್ದುಬಸ್ತಿನಲ್ಲಿಡಬೇಕು:
ಸ್ಟ್ಯಾನಿ ಪಿಂಟೋಕರ್ನಾಟಕದಲ್ಲಿ ವ್ಯವಸ್ಥಿತವಾಗಿ ಕ್ರೈಸ್ತರ ಮೇಲೆ ಮತಾಂತರದ ಆರೋಪಗಳನ್ನು ಹಾಕುತ್ತಲೇ ಬರುತ್ತಿದ್ದಾರೆ.
ಯಾವುದೇ ಆಧಾರವಿಲ್ಲದೆ ಸುಳ್ಳು ಕೇಸುಗಳನ್ನು ದಾಖಲಿಸುತ್ತಾ ಕ್ರೈಸ್ತರ ಮೇಲೆ ಆರೋಪಗಳನ್ನು ಹಾಕುತ್ತಿದ್ದಾರೆ ಇದೊಂದು ವ್ಯವಸ್ಥಿತವಾದ ಕ್ರೈಸ್ತರ ಮೇಲೆ ನಡೆಯುತ್ತಿರುವ ಷಡ್ಯಂತ್ರ, ದಿನದಿಂದ ದಿನಕ್ಕೆ ಕ್ರೈಸ್ತರ ಮೇಲೆ ನಡೆಯುತ್ತಿರುವ ದಬ್ಬಾಳಿಕೆ ಸುಳ್ಳು ಆರೋಪಗಳು ಅವ್ಯಾಚ ಪದಗಳಿಂದ ನಿಂದಿಸುವುದು, ಕ್ರೈಸ್ತರ ಪತ್ರಿಕೆಗಳನ್ನು ಬೈಬಲ್ ಗಳನ್ನು ಸುುಟ್ಟ ಹಾಕುವುದು, ಚರ್ಚುಗಳ ಮೇಲೆ ದಾಳಿ, ಕ್ರೈಸ್ತ ಪಾದ್ರಿಗಳ ಮತ್ತು ದೇವ ಸೇವಕರ ಮೇಲೆ ದಾಳಿ ಮಾಡುವುದು ಮಾತ್ರವಲ್ಲ ಇನ್ನೂ ಅನೇಕ ಕ್ರೈಸ್ತ ಧರ್ಮಕ್ಕೆ ದಕ್ಕೆ ಬರುವಂತ ಕಾರ್ಯಗಳನ್ನು ಮಾಡುತ್ತಲೇ ಬಂದಿದ್ದಾರೆ ಇದೊಂದು ವ್ಯಾಪಕವಾದ ಜಾಲ ಕ್ರೈಸ್ತರೇ ಇವರಿಗೆ ಗುರಿ, ಈ ದೇಶದಲ್ಲಿ ರಾಜ್ಯದಲ್ಲಿ ಕ್ರೈಸ್ತರಿಗೆ ಅವರ ಧರ್ಮದ ಆಚರಣೆಗಳನ್ನು ಮತ್ತು ಸಂವಿಧಾನದ ಪ್ರಕಾರ ಇರುವ ಹಕ್ಕುಗಳು ಸಿಗುತ್ತಿಲ್ಲ ಹಾಗಾದರೆ ಕ್ರೈಸ್ತರಿಗೆ ನ್ಯಾಯ ಕೊಡುವವರು ಯಾರು..? ಕ್ರೈಸ್ತರ ಮೇಲೆ ಇರುವ ಸುಳ್ಳು ಆರೋಪಗಳು ನಿಲ್ಲುವುದು ಯಾವಾಗ..? ಮತಾಂತರ ನಡೆಯುವುದು ಕಾನೂನಿನ ಚೌಕಟ್ಟಿನಲ್ಲಿ ಎಂದು ಇವರಿಗೆ ತಿಳಿಯುವುದು ಯಾವಾಗ..?
ಕಾನೂನಿಗೆ ಕಣ್ಣಿಲ್ಲ ಎಂದು ಹೇಳುವುದು ಸತ್ಯವಾಗಿದೆ..

1 Comments
True. I appreciate you brother. Said it rightly
ReplyDeleteKeep it up
I am Praying for you.
God bless you abundantly take care