Hot Posts

6/recent/ticker-posts

ಹಾಸನದಲ್ಲಿ ಮತಾಂತರಕ್ಕೆ ಯತ್ನ ಸುಳ್ಳು ಆರೋಪ

 ಹಾಸನದಲ್ಲಿ ಮತಾಂತರಕ್ಕೆ ಯತ್ನ ಆರೋಪ; ಹಿಂದೂಪರ ಸಂಘಟನೆಗಳಿಂದ ತರಾಟೆ; ಕೇಸ್ ದಾಖಲು




ಏನಿದರ ಸತ್ಯಸಂಗತಿ...?

ಸಂಪೂರ್ಣವಾದ ವಿವರವನ್ನು ಓದೋಣ ಕೊನೆಯ ಭಾಗದಲ್ಲಿ ಸತ್ಯ ಸಂಗತಿ ತಿಳಿಯೋಣ..


ಆರೋಪಿತ ಮಹಿಳೆ ಪ್ರತಿದಿನ ಉದ್ಯಾನವನಕ್ಕೆ ಆಗಮಿಸಿ ಅಲ್ಲಿಗೆ ಬರುತ್ತಿದ್ದ ಸ್ಥಳೀಯರನ್ನು ಮತಾಂತರವಾಗುವಂತೆ ಪುಸಲಾಯಿಸುತ್ತಿದ್ದರು ಎಂದು ಆರೋಪ ಕೇಳಿಬಂದಿದೆ.

ಹಾಸನ: ಮತಾಂತರಕ್ಕೆ ಯತ್ನಿಸುತ್ತಿದ್ದ ಆರೋಪದಡಿ ಸಾರ್ವಜನಿಕರು ಮಹಿಳೆಯೋರ್ವಳನ್ನು ತರಾಟೆಗೆ ತೆಗೆದುಕೊಂಡ ಘಟನೆ ಹಾಸನ ನಗರದ ಮಹಾರಾಜ ಪಾರ್ಕ್ನಲ್ಲಿ ನಡೆದಿದೆ. ರಾಧಮ್ಮ ಎಂಬ ಮಹಿಳೆಯ ಮೇಲೆ ಮತಾಂತರಕ್ಕೆ ಯತ್ನಿಸುತ್ತಿದ್ದ ಆರೋಪ ಕೇಳಿಬಂದಿದೆ. ಸ್ಥಳಕ್ಕೆ ಬಂದ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಮಹಿಳೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಜತೆಗೆ ಸ್ಥಳೀಯರು ಮತಾಂತರ ಯತ್ನದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಆರೋಪಿತ ಮಹಿಳೆ ಪ್ರತಿದಿನ ಉದ್ಯಾನವನಕ್ಕೆ ಆಗಮಿಸಿ ಅಲ್ಲಿಗೆ ಬರುತ್ತಿದ್ದ ಸ್ಥಳೀಯರನ್ನು ಮತಾಂತರವಾಗುವಂತೆ ಪುಸಲಾಯಿಸುತ್ತಿದ್ದರು ಎಂದು ಆರೋಪ ಕೇಳಿಬಂದಿದೆ. ಈ ವಿಷಯ ಇಂದು ಸ್ಥಳೀಯರ ಮೂಲಕ ಹಿಂದೂಪರ ಸಂಘಟನೆಗಳಿಗೆ ತಿಳಿದಿದೆ.  ಸ್ಥಳಕ್ಕೆ ಆಗಮಿಸಿದ ಪೊಲೀಸರು ಆರೋಪಿ ಮಹಿಳೆಯ ಬಳಿ ಇದ್ದ ಮತಾಂತರಕ್ಕೆ ಬಳಸುವ ಪುಸ್ತಕಗಳು ಮತ್ತು ಕರ ಪತ್ರಗಳನ್ನು ವಶಕ್ಕೆ ಪಡೆದಿದ್ದಾರೆ. ಹಾಸನದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸತ್ಯಸಂಗತಿ: ಆರೋಪಿತ ಮಹಿಳೆ ಮತಾಂತರ ಮಾಡುತ್ತಿದ್ದಾರೆ ಎಂಬುದು ಸತ್ಯಕ್ಕೆ ದೂರವಾದ ಮಾತು ಏಕೆಂದರೆ ಮತಾಂತರ ನಡೆಯುವುದು ಕಾನೂನಿನ ಚೌಕಟ್ಟಿನಡಿಯಲ್ಲಿ ಪಾರ್ಕ್ ಗಳಲ್ಲಿ ಮತಾಂತರ ನಡೆಯುವುದಿಲ್ಲ ಮುಖ್ಯವಾಗಿ ಇವರು ಸಾಮಾನ್ಯ ವ್ಯಕ್ತಿ ಯಾವುದೇ ವಕೀಲರು ಅಲ್ಲ, ನ್ಯಾಯಾಧೀಶರಲ್ಲ ಮತಾಂತರ ಮಾಡುವುದಕ್ಕೆ, ಆರೋಪಿತ ಮಹಿಳೆ ಏಸುಕ್ರಿಸ್ತನ ಅನುಯಾಯಿಯಾಗಿ ಸಂವಿಧಾನದಲ್ಲಿ ಬರೆಯಲ್ಪಪಟ್ಟಂತೆ ಆರ್ಟಿಕಲ್ 25 ಪ್ರಕಾರ ಧರ್ಮಪ್ರಚಾರ ಮಾಡುತ್ತಾರಷ್ಟೇ, ಅಲ್ಲಿ ಯಾರಿಗೂ ಕೂಡ ಬೇರೆ ಧರ್ಮದ ಬಗ್ಗೆ ಯಾವುದೇ ರೀತಿಯ ಮಾತುಗಳನ್ನು ಮಾತನಾಡಲಿಲ್ಲ ಎಂದು ಕಂಡುಬರುತ್ತದೆ, ಇವರು ಬಹಳಕಾಲದಿಂದ ಒಂದು ಭಾಗದಲ್ಲಿ ಕರಪತ್ರ ಹಂಚುವ ಕಾರ್ಯ ಮಾಡಿಕೊಂಡು ಬಂದಿದ್ದಾರೆ, ಇನ್ನುಮೇಲೆ ಯಾದರೂ ಕ್ರೈಸ್ತರ ಮೇಲೆ ಇಂಥ ಆರೋಪವನ್ನು ಹಾಕುವುದು ನಿಲ್ಲಿಸಿ ಸಮಾಜದಲ್ಲಿ ಶಾಂತಿಯನ್ನು ಕಾಪಾಡಿ ನಾವೆಲ್ಲರೂ ಭಾರತೀಯರು ಅವರವರ ಧರ್ಮಪ್ರಚಾರವನ್ನು ಅವರವರು ಮಾಡಬಹುದು.
ಈ ವಿಷಯವನ್ನು ಕೇಳಿದ ಕೂಡಲೇ ಭಾರತೀಯ ಒಕ್ಕೂಟದ ಸಂಸ್ಥಾಪಕರಾಗಿರುವ ಪ್ರಶಾಂತ್ ಜತ್ತನ್ನ ರವರು ಆ ಕೂಡಲೇ ಸ್ಥಳಕ್ಕೆ ಭೇಟಿ ನೀಡುತ್ತಾರೆ  

ಘಟನೆ ನಡೆದ ಸಂದರ್ಭದಲ್ಲಿ ಅನೇಕ ಕ್ರೈಸ್ತ ಮುಖಂಡರು ಹಾಸನ ಫಾಸ್ಟರ್ಸ್ ಫೆಲೋಶಿಪ್ ಇನ ಪದಾಧಿಕಾರಿಗಳು ಸಹೋದರಿಯನ್ನು ಪೊಲೀಸ್ ಠಾಣೆಯಿಂದ ಹೊರತರಲು ಪ್ರಯತ್ನಿಸಿದ್ದಾರೆ ಮುಂದೆ ಅವರಿಗೆ ಕೋರ್ಟಿನಿಂದ ನಿರೀಕ್ಷಣಾ ಜಾಮೀನು ಪಡೆಯಲು ಬೇಕಾದ ಸಹಾಯವನ್ನು ಒಕ್ಕೂಟದಿಂದ ಮಾಡುತ್ತೇನೆ ಎಂಬುದಾಗಿ ಹೇಳಿದಾಗ ಸಹೋದರಿಯ ಸಭೆಯ ಸಭಾ ಪಾಲಕರಾದ ಪಾಸ್ಟರ್ ಬಿಂದು ಅವರು ಎಲ್ಲ ಖರ್ಚುವೆಚ್ಚಗಳು ನಮ್ಮ ಸಭೆಯಿಂದ ನೋಡಿಕೊಳ್ಳುತ್ತೇವೆ ಎಂಬುದಾಗಿ ಹೇಳಿದ್ದಾರೆ ಸಂದರ್ಭದಲ್ಲಿ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಿದ್ದಾರೆ.

ನಂತರ ಇದರ ಕುರಿತಾಗಿ ಹಾಸನ ಜಿಲ್ಲೆಯ ಫಾಸ್ಟರ್ಸ್ ಫೆಲೋಶಿಪ್ ನೊಂದಿಗೆ ಚರ್ಚೆ ಮಾಡುತ್ತಾರೆ, ಹಾಸನ ಜಿಲ್ಲೆಯಲ್ಲಿ ಈ ರೀತಿಯಾದ ಘಟನೆಗಳು ಮರುಕಳಿಸದಂತೆ ಎಚ್ಚರವಹಿಸಲು ಮುಂದಿನ ಆಲೋಚನೆಗಳನ್ನು ಮಾಡಿರುತ್ತಾರೆ.

Post a Comment

0 Comments