Hot Posts

6/recent/ticker-posts

ಹೋಂ ನರ್ಸಿಂಗ್ ಮಾಡುವವರು ತಪ್ಪದೇ ಈ ಕಥೆಯನ್ನು ಓದಲೇಬೇಕು

ಬೆಂಗಳೂರಿನ ನಾಯಂಡಳ್ಳಿ ದೇವೇಗೌಡ ಪೆಟ್ರೋಲ್ ಬಂಕ್ ಹತ್ತಿರ ವಾಸಿಸುತ್ತಿರುವ ಲೀಲಾವತಿ ಎಂಬುವರ ಜೀವನದ ಕಥೆ

ಇದು ಕಥೆಯಲ್ಲ ಜೀವನ

ಹೋಂ ನರ್ಸಿಂಗ್ ಮಾಡುವವರು ತಪ್ಪದೇ ಈ ಕಥೆಯನ್ನು ಓದಲೇಬೇಕು

ಬೆಂಗಳೂರಿನ ನಾಯಂಡಳ್ಳಿ ದೇವೇಗೌಡ ಪೆಟ್ರೋಲ್ ಬಂಕ್ ಹತ್ತಿರ ವಾಸಿಸುತ್ತಿರುವ ಲೀಲಾವತಿ ಎಂಬುವರ ಜೀವನದ ಕಥೆ

ಕಡುಬಡತನದಲ್ಲಿ ವಾಸಿಸುತ್ತಿರುವ ಲೀಲಾವತಿಯವರು ಹೊಮ್ ನರ್ಸಿಂಗ್ ಕೆಲಸ ಮಾಡುತ್ತಿದ್ದಾರೆ, ಈ ಕೆಲಸವೇ ಇವರಿಗೆ ಜೀವನಕ್ಕೆ ಆಧಾರ, ಇವರಿಗೆ ಹಿಂದೆ-ಮುಂದೆ ಯಾರು ಇಲ್ಲ ನೆಂಟರು ಬಂದು ಬಳಗ ಯಾರು ಕೂಡ ಇಲ್ಲ, ಯೇಸುಕ್ರಿಸ್ತನನ್ನು ಹಿಂಬಾಲಿಸುವ ಇವರು ದೇವರೇ ನನಗೆ ಎಲ್ಲಾ  ಯೇಸುವೇ ನನಗೆ ಆಧಾರ ಅವರು ಬಿಟ್ಟರೆ ನನಗೆ ಯಾರು ಇಲ್ಲ ಎಂದು ಚಿಕ್ಕ ಗೂಡಿನಲ್ಲಿ ವಾಸಿಸುತ್ತಿದ್ದಾರೆ, ಎಲ್ಲಿ ಹೋಂ ನರ್ಸಿಂಗ್ ಕೆಲಸ ಸಿಗುತ್ತದೆಯೋ ಅಲ್ಲೇ ಅವರ ವಾಸ ಹೊಟ್ಟೆಪಾಡು ಕೆಲಸ ಹೀಗೆ ಇವರ ಜೀವನ ಅನೇಕ ವರ್ಷಗಳಿಂದ ಮುಂದುವರೆಯುತ್ತಿದೆ.

ವಿಷಯ ಈಗ ಪ್ರಾರಂಭವಾಗುತ್ತದೆ...
ಒಂದು ಸೆಕ್ಯೂರಿಟಿ ಏಜೆನ್ಸಿ ಮೂಲಕ ಎಲೆಕ್ಟ್ರಾನಿಕ್ ಸಿಟಿ ಜಿಎಂ ಇನ್ಫಿನಿಟಿ ಇಲ್ಲಿ ಒಂದು ಕುಟುಂಬದಲ್ಲಿ ಪೇಷಂಟ್ ನೋಡಿಕೊಳ್ಳಲು ಏಜೆನ್ಸಿ ಮೂಲಕ ಕೆಲಸ ಸಿಗುತ್ತದೆ, ಕೆಲಸಕ್ಕೆ ಸೇರುವ ಮುನ್ನ ಸೆಕ್ಯೂರಿಟಿ ಏಜೆನ್ಸಿ ಯವರು ಮುಂಚಿತವಾಗಿ ಪೇಷಂಟ್ ಕಡೆಯಿಂದ ಹಣ ಪಡೆದಿರುತ್ತಾರೆ, ನಂತರ ಲೀಲಾವತಿಯವರಿಗೆ ಅಲ್ಲಿ ಕೆಲಸ ಕೊಡುತ್ತಾರೆ ಕೆಲಸ ಕೊಡುವ ಮುಂಚೆ ಲೀಲಾವತಿಯವರಿಗೆ ನಿಮ್ಮ ಸಂಬಳವನ್ನು ನೀವು ಅಲ್ಲೇ ಪಡೆಯಬೇಕು ಎಂದು ತಿಳಿಸಿ ಕೆಲಸಕ್ಕೆ ಸೇರಿಸುತ್ತಾರೆ.

ಈ ವಿಷಯವನ್ನು ತಿಳಿಯದ ಲೀಲಾವತಿಯವರು, ಅಲ್ಲಿ ಕೆಲಸಕ್ಕೆ ಸೇರುತ್ತಾರೆ, ನಂತರ ಒಂದು ತಿಂಗಳು ಕಳೆಯಲು ಬಂದಾಗ ಇನ್ನೇನು ಸಂಬಳ ಪಡೆದುಕೊಳ್ಳಬೇಕು ಅನ್ನುವಷ್ಟರಲ್ಲಿ ಇವರ ಆರೋಗ್ಯದಲ್ಲಿ ಏರುಪೇರಾಗುತ್ತದೆ, ಇವರು  ಪೇಷಂಟ್ ಸಂಬಂಧಿಯವರ ಬಳಿ ಕೇಳಿಕೊಳ್ಳುತ್ತಾರೆ , ದಯವಿಟ್ಟು ನನಗೆ ಇಲ್ಲಿಂದ ಹೋಗಲು ಅನುಮತಿ ಕೊಡಿ ಹಾಗೆ ನನ್ನ ಸಂಬಳ ಕೂಡ ಕೊಡಿ ನನ್ನ ಆರೋಗ್ಯದ ಸ್ಥಿತಿ ಸರಿ ಇಲ್ಲ ನನ್ನ ಬದಲು ಮತ್ತೊಬ್ಬರನ್ನು ಸಂಸ್ಥೆಯಿಂದ ಇಲ್ಲಿಗೆ ಕಳಿಸಿಕೊಡುತ್ತಾರೆ ಎಂದು ತಿಳಿಸಿದಾಗ ಪೇಷಂಟ್ ಸಂಬಂಧಿ ನಿಮಗೆ ಸಂಬಳ  ಕೊಡುವುದಕ್ಕೆ ಆಗುವುದಿಲ್ಲ ಏಕೆಂದರೆ ಈ ಮೊದಲೇ ನಿಮ್ಮ ಸೆಕ್ಯೂರಿಟಿ ಏಜೆನ್ಸಿಗೆ ನಾವು ಕೊಟ್ಟಿದ್ದೇವೆ ಎಂದು ತಿಳಿಸುತ್ತಾರೆ, ಗಾಬರಿಯಾದ ಲೀಲಾವತಿಯವರು ದುಃಖಿಸುತ್ತಾ ಸೆಕ್ಯುರಿಟಿ ಏಜೆನ್ಸಿ ಗೆ ಕರೆ ಮಾಡುತ್ತಾರೆ ದಯವಿಟ್ಟು ನನಗೆ ಸಂಬಳ ಕೊಡಿ ಅಥವಾ ಕೊಡಿಸಿ ನನ್ನ ಆರೋಗ್ಯ ಏರುಪೇರಾಗಿದೆ ಎಂದು ತಿಳಿಸುತ್ತಾರೆ, ಆದರೆ ಸೆಕ್ಯುರಿಟಿ ಏಜೆನ್ಸಿ ಅವರು ನೇರವಾಗಿ ಅವರಿಗೆ ತಿಳಿಸುತ್ತಾರೆ ನೀವು ಅಲ್ಲೇ ಸಂಬಳವನ್ನು ಪಡೆಯಬೇಕು ನಮ್ಮಿಂದ ಯಾವುದೇ ಸಂಬಳ ಸಿಗುವುದಿಲ್ಲ ಈ ಮೊದಲೇ ನಿಮಗೆ ತಿಳಿಸಿದ್ದೇವೆ ಎಂದು ಹೇಳುತ್ತಾರೆ.

ಇದರಿಂದ ತಿಳಿಯುವುದು ಏನೆಂದರೆ ಇಂಥ ಅನೇಕ ಸೆಕ್ಯುರಿಟಿ ಏಜೆನ್ಸಿ ಗಳು ಇರುತ್ತಾರೆ, ಇವರು ಮೊದಲೇ ಹಣವನ್ನು ಪಡೆದು ಲೀಲಾವತಿ ಅಂತವರಿಗೆ ಮೋಸ ಮಾಡುತ್ತಾರೆ,

ಸ್ನೇಹಿತರೆ, ಒಂದು ತಿಂಗಳು ಕೆಲಸ ಮಾಡಿದ ಲೀಲಾವತಿಯವರು ಏನು ದ್ರೋಹ ಮಾಡಿದ್ದಾರೆ

ಹಿಂದೆ ಮುಂದೆ ಯಾರು ಇಲ್ಲ ಆರೋಗ್ಯಸ್ಥಿತಿ ಏರುಪೇರಾಗಿದೆ, ಕೆಲಸ ಮಾಡಿದವರಿಗೆ ಸಂಬಳವೂ ಇಲ್ಲ ಇವರಿಗೆ ನ್ಯಾಯ ಕೊಡಿಸುವವರು ಯಾರು??

ಕೊನೆಗೆ ಇವರು ಬಹಳ ದಿನಗಳಿಂದ ಇವರಿಗೆ ಪರಿಚಯರಾಗಿದ್ದ ಸಮಾಜ ಸೇವೆ ಮಾಡುತ್ತಿರುವ ಸ್ಟ್ಯಾನಿ ಪಿಂಟೋ ರವರಿಗೆ ಕರೆ ಮಾಡುತ್ತಾರೆ, ಸಂಪೂರ್ಣವಾದ ವಿಷಯವನ್ನು ತಿಳಿಸುತ್ತಾರೆ, ನಂತರ ಅವರಿಗೆ ಸಾಂತ್ವನವನ್ನು ಹೇಳುತ್ತಾ ಅವರಿಗೆ ಸಂಬಳ ಕೊಡಿಸುವುದಾಗಿ ಭರವಸೆ ಕೊಡುತ್ತಾರೆ, ಆ ಕೂಡಲೇ ಏಜೆನ್ಸಿ ಅವರಿಗೆ ಕರೆ ಮಾಡಿ ಲೀಲಾವತಿಯವರ ಸಂಬಳದ ಬಗ್ಗೆ ಫೋನಿನ ಮೂಲಕ ಸ್ಟ್ಯಾನಿ ಪಿಂಟೋ ರವರು ಚರ್ಚೆ ಮಾಡುತ್ತಾರೆ, ಆಗಲೂ ಕೂಡ ಈ ಏಜೆನ್ಸಿಯವರು ಅವರು ಪಡೆದ ಅಡ್ವಾನ್ಸ್ ಹಣದ ಬಗ್ಗೆ ಮರೆಮಾಚಿ ಖಂಡಿತ ಆ ಸಂಬಳವನ್ನು ನಾವು ಕೊಡಿಸುತ್ತೇವೆ ದಯವಿಟ್ಟು ನಮಗೆ ಸಮಯ ಕೊಡಿ ಎಂದು ತಿಳಿಸುತ್ತಾರೆ,
ಈ ವಿಷಯದ ಬಗ್ಗೆ ಸ್ಟ್ಯಾನಿ ಪಿಂಟೋ ರವರು ಏಜೆನ್ಸಿ ಯವರ ಮತ್ತು  ಪೇಷಂಟ್ ಸಂಬಂಧಿಕರ ಬಳಿ ಚರ್ಚೆ ಮಾಡುವುದು ವ್ಯರ್ಥ ಎಂದು ತಿಳಿದು ನೇರವಾಗಿ ಸಹೋದರ ಅರುಣ್ ರವರೊಂದಿಗೆ ಪೇಷಂಟ್ ಮನೆಗೆ ಧಾವಿಸುತ್ತಾರೆ, ಅಷ್ಟರೊಳಗೆ ಲೀಲಾವತಿಯವರು ದುಃಖಿಸುತ್ತಾ ಮನೆಗೆ ಹೋಗಲು ತಮ್ಮ ಬಳಿ ಇರುವ ಚಿಕ್ಕ ಬ್ಯಾಗನ್ನು ಹಿಡಿದು ರಸ್ತೆಗೆ ಬಂದಿರುತ್ತಾರೆ, ನಂತರ ಸ್ಟ್ಯಾನಿ ಪಿಂಟೋ ರವರು ಅಲ್ಲಿ ದಾವಿಸಿ ಲೀಲಾವತಿಯವರನ್ನು ಕರೆದುಕೊಂಡು ಮತ್ತೆ ಪೇಷಂಟ್ ಸಂಬಂಧಿಕರ ಬಳಿ ಹೋಗುತ್ತಾರೆ ಒಂದು ಗಂಟೆಯ ಕಾಲ ಚರ್ಚೆ ನಡೆಯುತ್ತದೆ, ಇದರಲ್ಲಿ ಏಜೆನ್ಸಿ ಅವರ ತಪ್ಪು ಇದೆ ಎಂದು ಕಂಡುಬರುತ್ತದೆ, ನಂತರ ಅಲ್ಲಿಂದಲೇ ಏಜೆನ್ಸಿಯವರಿಗೆ ಕರೆ ಮಾಡಿ ಚರ್ಚಿಸುವಾಗ ಏಜೆನ್ಸಿಯವರಿಗೆ ಅವರು ಮಾಡಿದ ತಪ್ಪಿನ ಅರಿವಾಗುತ್ತದೆ, ಸೋಮವಾರದ ಒಳಗೆ ಅವರ ಸಂಬಳವನ್ನು ಕೊಡುವುದಾಗಿ ತಿಳಿಸುತ್ತಾರೆ, ಸ್ಟ್ಯಾನಿ ಪಿಂಟೋ ರವರು ಏಜೆನ್ಸಿಯವರಿಗೆ ಹೇಳುತ್ತಾರೆ ಒಂದು ವೇಳೆ ಸೋಮವಾರದ ಒಳಗೆ ನೀವು ಇವರ ಸಂಬಳವನ್ನು ಕೊಡದೆ ಹೋದರೆ ನಿಮ್ಮ ಸಂಸ್ಥೆಯ ಮೇಲೆ ದೂರು ದಾಖಲಾಗುವುದು ಎಂದು ತಿಳಿಸುತ್ತಾರೆ,
ನಂತರ ಭಾನುವಾರ ಮಧ್ಯಾಹ್ನದ ಒಳಗೆ ಲೀಲಾವತಿಯವರ ಬ್ಯಾಂಕ್ ಖಾತೆಗೆ ಸಂಬಳ ವರ್ಗಾವಣೆ ಆಗುತ್ತದೆ, ನಂತರ ಲೀಲಾವತಿಯವರು ಸ್ಟ್ಯಾನಿ ಪಿಂಟೋ ರವರಿಗೆ ಕರೆ ಮಾಡಿ ಸಂತೋಷದಿಂದ ದುಃಖಿಸುತ್ತಾ ಸಂಬಳ ಸಿಕ್ಕಿದೆ ಎಂದು ತಿಳಿಸುತ್ತಾರೆ.

ಲೀಲಾವತಿಯವರಿಗೆ ಬಹಳ ಸಂತೋಷವಾಗುತ್ತದೆ ಮತ್ತು ನಾನು ನಂಬಿದ ಆ ಯೇಸು ದೇವರು ನನ್ನ ಕೈ ಬಿಡಲಿಲ್ಲ ಸ್ಟ್ಯಾನಿ ಪಿಂಟೋ ರವರ ಮೂಲಕ ನನಗೆ ಸಹಾಯ ಮಾಡಿದರು ಸಂತೋಷಪಡುತ್ತಾರೆ.

ಸ್ನೇಹಿತರೆ, ಇದನ್ನು ಓದಿದ ನಿಮಗೆ ಅನೇಕರಿಗೆ ಈ ರೀತಿಯಾಗಿ ಮೋಸ ಆಗಿರಬಹುದು, ಇಂಥ ಏಜೆನ್ಸಿಗಳು ಬಹಳಷ್ಟು ಬೆಳೆದುನಿಂತಿವೆ, ತಿಂಗಳೆಲ್ಲಾ ನ್ಯಾಯಬದ್ಧವಾಗಿ ಕೆಲಸ ಮಾಡಿದರು ಸಂಬಳ ಸಿಗುವುದಿಲ್ಲ, ದಯವಿಟ್ಟು ಕೆಲಸಕ್ಕೆ ಸೇರುವ ಮುಂಚೆ ಸಂಸ್ಥೆಯ ಮೂಲಕ ಸಂಬಳದ ಬಗ್ಗೆ ಚರ್ಚೆ ಮಾಡಿ ಮತ್ತು ಅವರ ಬಳಿ ಸಂಬಳದ ಬಗ್ಗೆ ಯಾವುದಾದರೂ ಒಂದು ದಾಖಲಾತಿಯನ್ನು ಪಡೆಯಿರಿ. ಇದು ನಿಮಗೆ ಬಹಳ ಪ್ರಯೋಜನವಾಗುವುದು ಒಂದು ವೇಳೆ ಸಂಬಳ ಸಿಗದೆ ಹೋದ ಪಕ್ಷದಲ್ಲಿ ನೀವು ಅವರ ಮೇಲೆ ಕೇಸು ದಾಖಲಿಸಲು ಇದು ಪ್ರಯೋಜನವಾಗುತ್ತದೆ.

"ಮೋಸ ಹೋಗುವವರು ಇರುವ ತನಕ ಮೋಸ ಮಾಡುವವರು ಇದ್ದೇ ಇರುತ್ತಾರೆ"

Post a Comment

1 Comments

  1. We are appreciated your work Brother May god bless you abundantly 🙏❤️

    ReplyDelete