ಬೆಳಗಾವಿಯಲ್ಲಿ ಬೋರ್ವೆಲ್ಗೆ ಬಿದ್ದ ಎರಡೂವರೆ ವರ್ಷದ ಮಗು; ಬದುಕಿ ಬರಲು ಪ್ರಾರ್ಥಿಸೋಣ
ಬೆಳಗಾವಿ: ಸಾರ್ವಜನಿಕರ ಮನ ಮಿಡಿಯುವಂತಹ ಘಟನೆಯೊಂದು ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಆಲಖನೂರಿನಲ್ಲಿ ನಡೆದಿದೆ. ಎರಡೂವರೆ ವರ್ಷದ ಮಗುವೊಂದು ಬೋರ್ವೆಲ್ಗೆ ಬಿದ್ದಿರುವ ಕರುಣಾಜನಕ ಘಟನೆಯೊಂದು ವರದಿಯಾಗಿದೆ. ಶರತ್ ಹಸಿರೆ ಎಂಬ ಎರಡೂವರೆ ವರ್ಷದ ಮಗುವೇ ಬೋರ್ವೆಲ್ಗೆ ಬಿದ್ದ ದುರ್ದೈವಿ. ನಿನ್ನೆ ಸಂಜೆಯಿಂದಲೇ ಮಗು ನಾಪತ್ತೆಯಾಗಿತ್ತು. ಕುಟುಂಬದವರು ಮಗುವಿಗಾಗಿ ಎಲ್ಲೆಡೆ ಹುಡುಕಾಡಿದ್ದಾರೆ. ಆದರೆ ಎಲ್ಲೂ ಪತ್ತೆಯಾಗಿರಲಿಲ್ಲ. ಮನೆಯಿಂದ 200 ಮೀ. ದೂರದಲ್ಲಿ ಕೊರೆಸಿದ್ದ ಬೋರ್ವೆಲ್ಗೆ ಮಗು ಶರತ್ ಬಿದ್ದಿರುವುದು ತಿಳಿದುಬಂದಿದೆ. 15 ಅಡಿ ಆಳದಲ್ಲಿ ಮಗು ಸಿಲುಕಿರುವ ಶಂಕೆ ವ್ಯಕ್ತವಾಗಿದೆ.
ಮಗುವನ್ನು ರಕ್ಷಿಸಲು ಸ್ಥಳಕ್ಕೆ ತಹಶೀಲ್ದಾರ್ ಕಳಿಸಿ ಕಾರ್ಯಾಚರಣೆ ಆರಂಭಿಸಿದ್ದೇವೆ. ಅಗ್ನಿಶಾಮಕ ಸಿಬ್ಬಂದಿಯಿಂದ ಮಗುವಿನ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದೇವೆ. ನಿನ್ನೆ ಸಂಜೆ ಬಾಲಕ ನಾಪತ್ತೆಯಾದ ಬಗ್ಗೆ ತಂದೆ ದೂರು ನೀಡಿದ್ದರು ಎಂದು ಟಿವಿ9ಗೆ ಬೆಳಗಾವಿ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಮಾಹಿತಿ ನೀಡಿದ್ದಾರೆ.
ಕೃಪೆ: ಟಿವಿ9

0 Comments