ಬೆಳಗಾವಿ: ತಲ್ವಾರ್ ಹಿಡಿದು ಚರ್ಚ್ ಒಳಗೆ ನುಗ್ಗಿದ ಅಪರಿಚಿತ ವ್ಯಕ್ತಿಯೊಬ್ಬ ಫಾದರ್‌ಗೆ ಬೆದರಿಕೆ ಹಾಕಿರುವ ಘಟನೆ ಬೆಳಗಾವಿಯ ಬಾಕ್ಸೈಟ್ ರಸ್ತೆಯಲ್ಲಿರುವ ಸೇಂಟ್ ಜೋಸೆಫ್ ದಿ ವರ್ಕರ್ಸ್ ಚರ್ಚ್‌ನಲ್ಲಿ ನಡೆದಿದೆ.
ಫಾದರ್ ಫ್ರಾನ್ಸಿಸ್ಗೆ ಅಪರಿಚಿತ ವ್ಯಕ್ತಿ ಬೆದರಿಕೆ ಹಾಕಿದ್ದಾನೆ.
ಕಾಂಪೌಂಡ್ ಜಿಗಿದು ಮೊದಲ ಮಹಡಿಯ ಮನೆ ಎದುರು ಬಂದಿದ್ದ. ಈ ವೇಳೆ ಆತನಿಂದ ಹೇಗೋ ತಪ್ಪಿಸಿಕೊಂಡು ಫಾದರ್ ಕೆಳಗಿಳಿದು ಬಂದಿದ್ದಾರೆ. ಬಳಿಕ ಸ್ಥಳೀಯರು ಫಾದರ್ ರಕ್ಷಣೆಗೆ ಧಾವಿಸುತ್ತಿದ್ದಂತೆ ಅಪರಿಚಿತ ವ್ಯಕ್ತಿ ಅಲ್ಲಿಂದ ಪರಾರಿಯಾಗಿದ್ದಾನೆ.
ಅಪರಿಚಿತ ವ್ಯಕ್ತಿ ತಲ್ವಾರ್ ಹಿಡಿದು ಚರ್ಚ್ ಒಳಗೆ ನುಗ್ಗುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ವ್ಯಕ್ತಿಯ ಕೈಯಲ್ಲಿ ತಲ್ವಾರ್ ನೋಡುತ್ತಿದ್ದಂತೆ ಫಾದರ್ ಹೊರಗೆ ಓಡಿ ಬಂದಿರವುದು ದೃಶ್ಯದಲ್ಲಿದೆ. ಚರ್ಚ್ಗೆ ಸೇರಿದ ಮನೆಯ ಸ್ಟೋರ್ ರೂಮ್‌ನಲ್ಲಿ ಕಳ್ಳತನಕ್ಕೆ ಬಂದಿದ್ದ ಎಂಬ ಶಂಕೆ ವ್ಯಕ್ತವಾಗಿದೆ.
ಎಪಿಎಂಸಿ ಪೊಲೀಸರು ಸ್ಥಳಕ್ಕೆ ಭೇಟಿ, ಪರಿಶೀಲನೆ ನಡೆಸಿದ್ದಾರೆ. ಫಾದರ್ ಪ್ರಾನ್ಸಿಸ್ ಅವರಿಂದ ಘಟನೆಯ ಮಾಹಿತಿ ಪಡೆಕೊಂಡಿದ್ದು, ಪ್ರಕರಣ ದಾಖಲಿಸಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ
ನಿರಂತರವಾಗಿ ಕ್ರೈಸ್ತರ ಮೇಲೆ ಸುಳ್ಳು ಆರೋಪಗಳನ್ನು ಹಾಕಿ ಸುಳ್ಳು ಕೇಸುಗಳನ್ನು ದಾಖಲಿಸಿ ಧಾರ್ಮಿಕ ವಿಧಿ ಆಚರಣೆಗಳಿಗೆ ತೊಂದರೆ ಉಂಟು ಮಾಡುತ್ತಿದ್ದಾರೆ, ಸಮಾಜದಲ್ಲಿ ಕೋಮುವಾದ ಗಳನ್ನು ಎಬ್ಬಿಸುತ್ತಿದ್ದಾರೆ, ಇಂಥ ಕಿಡಿಗೇಡಿಗಳನ್ನು ಆದಷ್ಟು ಬೇಗ ಪೊಲೀಸರು ಬಂಧಿಸಬೇಕಾಗಿದೆ.
ಕ್ರೈಸ್ತರು ಶಾಂತಿಪ್ರಿಯರು ಮಾತ್ರವಲ್ಲ ಭಾರತೀಯ ಕ್ರೈಸ್ತರ ಆಗಿದ್ದಾರೆ ಹೊರತಾಗಿ ಹೊರದೇಶದಿಂದ ಬಂದವರಲ್ಲ ಹಾಗಾಗಿ ಅವರಿಗೆ ಈ ದೇಶದಲ್ಲಿ ಬದುಕಲು ಸಮಾನ ಹಕ್ಕಿದೆ, ಸಂವಿಧಾನ ಕೇವಲ ಒಂದು ಧರ್ಮಕ್ಕೆ ಸೀಮಿತವಾಗಿಲ್ಲ ಎಲ್ಲ ಧರ್ಮಕ್ಕೆ ಅನ್ವಯ ಆಗುತ್ತದೆ.
2 Comments
ಪೊಲೀಸರು ಆದಷ್ಟು ಬೇಗ ಅಪರಿಚಿತ ವ್ಯಕ್ತಿಯನ್ನು ಪತ್ತೆಹಚ್ಚಿ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಬೇಕು ಇಲ್ಲವಾದರೆ ಮುಂಬರುವ ದಿನಗಳಲ್ಲಿ ಪೋಲೀಸರ ವಿರುದ್ದವೇ ಹೋರಾಟ ಮಾಡಬೇಕಾಗುತ್ತದೆ.
ReplyDeleteMatthew 27:3-5 (KAN) ಆಗ ಆತನನ್ನು ದ್ರೋಹದಿಂದ ಹಿಡಿದುಕೊಟ್ಟಿದ್ದ ಯೂದನು ಯೇಸುವಿಗೆ ಮರಣದಂಡನೆಯ ತೀರ್ಪು ಆಗಿರುವುದನ್ನು ನೋಡಿ, ಪಶ್ಚಾತ್ತಾಪಪಟ್ಟು, ಆ ಮೂವತ್ತು ಬೆಳ್ಳಿ ನಾಣ್ಯಗಳನ್ನು ಮುಖ್ಯಯಾಜಕರಿಗೂ ಹಿರಿಯರಿಗೂ ಹಿಂದಿರುಗಿಸಿದನು.
ReplyDelete<> ಅಂದನು. ಅದಕ್ಕವರು, <> ಅಂದರು.
ಆಗ ಅವನು ದೇವಾಲಯದಲ್ಲಿ ಆ ಹಣವನ್ನು ಎಸೆದು ಹೊರಟುಹೋಗಿ ನೇಣು ಹಾಕಿಕೊಂಡು ಸತ್ತನು.
https://alkitab.app/v/e87d135f8bdc