ಉಡುಪಿ ಜಿಲ್ಲೆಯಲ್ಲಿ ಕ್ರೈಸ್ತ ಮಂದಿರಕ್ಕೆ ಅಕ್ರಮವಾಗಿ ನುಗ್ಗಿದ ಕಿಡಿಗೇಡಿಗಳು
ಉಡುಪಿ: ಪ್ರಾರ್ಥನಾ ಮಂದಿರದಲ್ಲಿ ಪ್ರಾರ್ಥನೆ ಮಾಡುವಾಗ ಕ್ರೈಸ್ತ ವಿರೋಧಿಗಳು ಅಕ್ರಮವಾಗಿ ನುಗ್ಗಿದಲ್ಲದೆ, ಕ್ರೈಸ್ತರ ಮೇಲೆ ಮತಾಂತರ ಎಂಬ ಸುಳ್ಳು ಆರೋಪವನ್ನು ಮಾಡಿದ್ದಾರೆ ಇದನ್ನು ಕರ್ನಾಟಕ ಕ್ರೈಸ್ತ ಸಂಘಟನೆ ವತಿಯಿಂದ ತೀವ್ರವಾಗಿ ಖಂಡಿಸುತ್ತೇವೆ ಎಂದು ಸಂಘಟನೆಯ ಅಧ್ಯಕ್ಷರಾದ ಸ್ಟ್ಯಾನಿ ಪಿಂಟೋ ರವರು ಹೇಳಿದ್ದಾರೆ.
ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಕ್ರೈಸ್ತ ಸಂಸ್ಥೆಗೆ ಸೇರಿದ ನಕ್ರೆ ಈ ಸ್ಥಳದಲ್ಲಿ ಕ್ರೈಸ್ತ ವಿರೋಧಿಗಳು ಅಕ್ರಮ ಪ್ರವೇಶ ಮಾಡಿದಲ್ಲದೆ ಮಕ್ಕಳು ಮಹಿಳೆಯರೆನ್ನದೆ ಅವ್ಯಚ ಶಬ್ದಗಳಿಂದ ನಿಂದಿಸಿ ಮತಾಂತರ ಎಂಬ ಸುಳ್ಳು ಆರೋಪವನ್ನು ಮಾಡಿದ್ದಾರೆ, ಇಂಥವರ ಮೇಲೆ ಕಾನೂನು ಈ ಕೂಡಲೇ ಕ್ರಮ ಕೈಗೊಳ್ಳಬೇಕು.
ಈ ವಿಚಾರದಲ್ಲಿ ಅನೇಕ ಮಾಧ್ಯಮಗಳು ತಪ್ಪಾಗಿ ಪ್ರಸಾರ ಮಾಡುತ್ತಿದ್ದಾರೆ ಮತ್ತು ಕೋಮು ಗಲಭೆ ಮಾಡುವವರ ಪರವಾಗಿ ನಿಂತಂತಿದೆ, ಇಂತಹ ಮಾಧ್ಯಮಗಳ ಮೇಲೆ ಕಾನೂನು ಈ ಕ್ಷಣವೇ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸುತ್ತೇವೆ.
ಯಾವುದೇ ಧರ್ಮವಾದರೂ ನಾವು ಪ್ರೀತಿಸಬೇಕು ಭಾರತ ದೇಶದಲ್ಲಿ ಅನೇಕ ಧರ್ಮಗಳಿವೆ, ಅವರವರ ಆಚಾರ-ವಿಚಾರಗಳು ಅವರಿಗೆ ಬಿಟ್ಟಿದ್ದು, ಆದರೆ ರಾಜ್ಯದ ಹಲವೆಡೆ ಕ್ರೈಸ್ತರ ಮೇಲೆ ನಿರಂತರವಾಗಿ ದೌರ್ಜನ್ಯ ನಡೆಯುತ್ತಲೇ ಇದೆ, ಈ ದಿನ ಶುಕ್ರವಾರ ಎಂದಿನಂತೆ ಪ್ರಾರ್ಥನೆ ನಡೆಯುವಾಗ ಪ್ರಾರ್ಥನಾ ಸ್ಥಳಕ್ಕೆ ಕ್ರೈಸ್ತ ವಿರೋಧಿಗಳು ಅಕ್ರಮವಾಗಿ ಭಯೋತ್ಪಾದಕರಂತೆ ನುಗ್ಗಿ, ಮಕ್ಕಳು ಮಹಿಳೆಯರು ಎಂದು ನೋಡದೆ ಅವ್ಯಚ ಪದಗಳಿಂದ ನಿಂದಿಸಿ ಅಲ್ಲೇ ಮಾಡಿದಲ್ಲದೆ ಬೆದರಿಕೆ ಹಾಕಿದ್ದಾರೆ ಇಂಥವರನ್ನು ಕಾನೂನು ಈ ಕೂಡಲೇ ಬಂಧಿಸಬೇಕು ಮತ್ತು ರಾಜ್ಯದಲ್ಲೆಡೆ ಕ್ರೈಸ್ತರ ಮೇಲೆ ನಡೆಯುತ್ತಿರುವ ದೌರ್ಜನ್ಯ ನಿಲ್ಲಬೇಕು ಮತ್ತು ಇಂತಹ ಕೋಮುವಾದಿಗಳಿಗೆ ಸರಿಯಾದ ಶಿಕ್ಷೆ ನೀಡಬೇಕು ಎಂದು ಮನವಿ ಮಾಡಿಕೊಳ್ಳುತ್ತೇವೆ, ಇದರ ಕುರಿತಾಗಿ ಆದಷ್ಟು ಬೇಗ ಗೃಹಸಚಿವರನ್ನು ಮತ್ತು ಮಾನ್ಯ ಮುಖ್ಯಮಂತ್ರಿಯವರನ್ನು ಮಾತ್ರವಲ್ಲದೆ ಪೊಲೀಸ್ ಆಯುಕ್ತರನ್ನು ಭೇಟಿಯಾಗಿ ಶಿಕ್ಷೆ ಕೊಡಿಸುವ ಕಾರ್ಯವನ್ನು ಕೈಗೊಳ್ಳುತ್ತೇವೆ.

2 Comments
Good work brother
ReplyDeleteBandisodalla. Met meyaalli hodeeri
ReplyDelete