ಉಡುಪಿ : ಕೊರಗ ಸಮುದಾಯದ ಮದುವೆ ಮನೆಗೆ ನುಗ್ಗಿ ಪೋಲಿಸರಿಂದ ದೌರ್ಜನ್ಯ ಪ್ರಕರಣ…!! ಕೋಟ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಸಸ್ಪೆಂಡ್, ಐವರು ಪೋಲಿಸರ ಎತ್ತಂಗಡಿ…!!
ಮೊನ್ನೆ ರಾತ್ರಿ ಉಡುಪಿ ಜಿಲ್ಲೆಯ ಕೋಟತಟ್ಟು ಕೊರಗ ಕಾಲೋನಿಯ ಮೆಹೆಂದಿ ಕಾರ್ಯಕ್ರಮಕ್ಕೆ ನುಗ್ಗಿ ಕೊರಗ ಸಮುದಾಯದವರ ಮೇಲೆ ಲಾಠಿಯಲ್ಲಿ ಥಳಿಸಿದ ಪ್ರಕರಣ ವಿರೋಧಿಸಿ ರಾಜ್ಯಾದ್ಯಂತ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಅದೂ ಅಲ್ಲದೇ ಕೋಟ ಶ್ರೀನಿವಾಸನ್ ಪೂಜಾರಿ ಅವರ ಸ್ವಕ್ಷೇತ್ರ ಎನ್ನುವ ಕಾರಣಕ್ಕಾಗಿ ಭಾರೀ ಚರ್ಚೆಯೂ ನಡೆದಿತ್ತು.
ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಟ ಠಾಣೆ ಪಿಎಸ್ಐ ಸಂತೋಷ್ ಬಿ.ಪಿ ಅವರನ್ನು ಸಸ್ಪೆಂಡ್ ಮಾಡಲಾಗಿದ್ದು, ಉಳಿದ ಐವರನ್ನು ಎತ್ತಂಗಡಿ ಮಾಡಲಾಗಿದೆ.
ಈ ಕುರಿತು ಇಂದು ಮಾಹಿತಿ ನೀಡಿರುವ ಉಡುಪಿ ಎಸ್ಪಿ ವಿಷ್ಣುವರ್ಧನ್, ಕೋಟದಲ್ಲಿ ನಡೆದ ಕೊರಗ ಸಮುದಾಯದವರ ಮೇಲಿನ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾ ವರದಿ ಆಧಾರದಲ್ಲಿ ಕೋಟ ಪಿಎಸ್ಐ ಅವರನ್ನು ಪಶ್ಚಿಮ ವಲಯ ಐಜಿಪಿಯವರು ಅಮಾನತು ಮಾಡಿದ್ದಾರೆ.
ಇನ್ನು ಪ್ರಕರಣದ ಉಳಿದ ಐದು ಮಂದಿ ಪೊಲೀಸ್ ಸಿಬ್ಬಂದಿಗಳನ್ನು ಕೋಟ ಪೊಲೀಸ್ ಠಾಣೆಯಿಂದ ವರ್ಗಾವಣೆ ಮಾಡಲಾಗಿದೆ ಎಂದು ಹೇಳಿದ್ದಾರೆ.
ಏನಿದು ಘಟನೆ?
ಉಡುಪಿಯ ಕೋಟತಟ್ಟು ಗ್ರಾ.ಪಂ ವ್ಯಾಪ್ತಿಯ ಕೊರಗ ಕಾಲನಿಯ ಮದುವೆ ಮನೆಗೆ ನುಗ್ಗಿ ಕೋಟ ಪೊಲೀಸರಿಂದ ದಾಂಧಲೆ ನಡೆದಿತ್ತು. ಕೊರಗ ಸಮುದಾಯದ ಮೆಹೆಂದಿ ಕಾರ್ಯಕ್ರಮದಲ್ಲಿ ಲಾಠಿ ಬೀಸಿದ್ದ ಪೊಲೀಸರು, ಡಿ.ಜೆ ಹಾಕಿದ್ದಕ್ಕೆ ಕಾರ್ಯಾಚರಣೆ ನಡೆಸಲಾಗಿದೆ ಎಂದು ಸಮರ್ಥಿಸಿಕೊಂಡಿದ್ದರು
ಅಲ್ಲದೇ ಮದುಮಗನೂ ಸೇರಿದಂತೆ ಹಲವರ ಮೇಲೆ ಹಲ್ಲೆ ನಡೆಸಿದ್ದು, ಠಾಣೆಗೆ ಕರೆದೊಯ್ದು ಅಂಗಿ ಬಿಚ್ಚಿಸಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿತ್ತು.
ವಿನಾಶದ ಅಂಚಿನಲ್ಲಿರುವ ಕೊರಗ ಸಮುದಾಯ ದವರನ್ನು ಬದುಕಲು ಬಿಡಿ, ಮುಂದೆಂದೂ ಈ ಸಮುದಾಯದವರ ಮೇಲೆ ಪೊಲೀಸರ ದೌರ್ಜನ್ಯ ನಡೆಯದಿರಲಿ ಎಂದು ಸರ್ಕಾರದ ಬಳಿ ಮನವಿ ಮಾಡಿಕೊಳ್ಳುತ್ತೇವೆ
-ಸ್ಟ್ಯಾನಿ ಪಿಂಟೋ ಸಾಮಾಜಿಕ ಹೋರಾಟಗಾರರು
0 Comments